ಹಾಲಪ್ಪ ಆಚಾರ ರವರಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿ: ಪಾಟೀಲ
ಯಲಬುರ್ಗಾ 04: ಜಿಲ್ಲೆಯ ಹಿರಿಯ ಶಾಸಕ ಮತ್ತು ಸಹಕಾರಿ ರಂಗದ ಭೀಷ್ಮ ಹಾಲಪ್ಪ ಆಚಾರ ರವರಿಗೆ ಸಚಿವ ಸ್ಥಾನ ದೊರಕಿರುವುದು ಸಂತಸದ ಸಂಗತಿಯಾಗಿದ್ದು, ಇವರಿಂದ ಹಿಂದುಳಿದಿರುವ ಕೊಪ್ಪಳ ಜಿಲ್ಲೆ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದು ಮಾಜಿ ಜಿ.ಪಂ ಸದಸ್ಯ ಸಿ.ಹೆಚ್.ಪಾಟೀಲ ಹೇಳಿದ್ದಾರೆ. ಅವರು ಈ ಕುರಿತು ಪತ್ರಕಾ ಪ್ರಕಟಣೆ ನೀಡಿದ್ದಾರೆ. ಜಿಲ್ಲೆಯ ಜನತೆ ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಆಚಾರರವರಿಂದ ಮುಕ್ತಿ ಸಿಗುತ್ತದೆ. ಆಚಾರ ರವರ ಕನಸಿನ ಕೂಸಾಗಿರುವ ಏತನೀರಾವರಿ ಯೋಜನೆ ಸಾಕಾರಗೊಳ್ಳಲಿದ್ದು, ಮುಖ್ಯವಾಗಿ ಜಿಲ್ಲೆಯಲ್ಲಿ ಹಾಲಪ್ಪನವರು ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಅವರ ದೂರದೃಷ್ಠಿಕೋನ ಅಭಿವೃದ್ಧಿಪರ ಚಿಂತನೆ ಮತ್ತು ಕ್ಲೀನ್ ಹ್ಯಾಂಡ್ ಪರ್ಸನ್ ಎಂದೇ ಕ್ಯಾತಿಗೊಂಡಿರುವ ಹಾಲಪ್ಪನವರು ಯಡಿಯೂರ್ಪ ಮತ್ತು ಬೊಮ್ಮಾಯಿಯವರ ಮಾರ್ಗದರ್ಶನದಲ್ಲಿ ಮುಂದುವರೆದಿದ್ದು, ಇವರಿಂದ ಜಿಲ್ಲೆ ರಾಜ್ಯ, ವಿಶೇಷವಾಗಿ ಯಲಬುರ್ಗಾ ತಾಲೂಕು ಅಭಿವೃದ್ಧಿಯಾಗಲಿದ್ದು, ಅದೇ ರೀತಿ ಪ್ರಾದೇಶಿಕ ಅಸಮತೋಲನೆಯನ್ನು ಬಿ.ಜೆ.ಪಿ ಹೈ ಕಮಾಂಡ್ ಸರಿದೂಗಿ ಹಾಲಪ್ಪನವರನ್ನು ಸಚಿವರನ್ನಾಗಿ ಮಾಡಿದ್ದು, ಸಂತಸದ ಸಂಗತಿ ಎಂದು ಜಿ.ಪಂ. ಮಾಜಿ ಸದಸ್ಯ ಸಿ.ಹೆಚ್.ಪಾಟೀಲ ಪತ್ರಕಾ ಪ್ರಕಟಣೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.