ಮಹಲಿಂಗಪುರ

ಸಕರ್ಾರ, ಆರೋಗ್ಯ ತಜ್ಞರ ಮಾರ್ಗದಶರ್ಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಿ

ಸಕರ್ಾರ, ಆರೋಗ್ಯ ತಜ್ಞರ ಮಾರ್ಗದಶರ್ಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಿ

ನಗರದ ಕೋವಿಡ್ ಕೇಂದ್ರಕ್ಕೆ ಉಸ್ತುವಾರಿ ಸಚಿವರ ಭೇಟಿ ! ಮಾಹಿತಿ ನೀಡಿದ ಶಾಸಕ ಸಿದ್ದು ಸವದಿ

ಮಹಾಲಿಂಗಪುರ : ಕೋವಿಡ್ ರೋಗದ ಬಗ್ಗೆ ಯಾರೂ ಹೆದರದೆ ಇದನ್ನು ಬೇರು ಸಮೇತ ಕಿತ್ತೊಗೆಯಲು ಸಕರ್ಾರದ ಹಾಗೂ ಆರೋಗ್ಯ ತಜ್ಞರ ಮಾರ್ಗದಶರ್ಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪಟ್ಟಣದ ಸಾರ್ವಜನಿಕರಿಗೆ ಕರೆ ಸಚಿವ ಉಮೇಶ ಕತ್ತಿ ಕರೆ ನೀಡಿದರು.ಅವರು ಬುಧವಾರ ಸಾಯಂಕಾಲ ಕನಕರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಹಾಗೂ ಆಸ್ಪತ್ರೆಯಲ್ಲಿ ಕೈಗೊಂಡ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದ ಅವರು ಕೊರೋನಾ ಎರಡನೇ ಅಲೆ ಆರಂಭವಾಗಿ ದೇಶಾದ್ಯಂತ ತನ್ನ ರೌದ್ರ ನರ್ತನ ಪ್ರಕಟಿಸುತ್ತಿದೆ. ಸಾರ್ವಜನಿಕರು ಸಹ ಸಾಮಾಜಿಕ ಅಂತರ, ಸ್ಯಾನಿಟೈಸರ್, ಕಡ್ಡಾಯ ಮಾಸ್ಕ್ ಧಾರಣೆ ಇನ್ನಿತರ ಆರೋಗ್ಯ ಸೂತ್ರಗಳನ್ನು ಪಾಲಿಸುವ ಮೂಲಕ ರೋಗವನ್ನು ದೂರವಿಡಲು ಶ್ರಮಿಸಿ ಕೊರೋಣ ಮುಕ್ತ ನಗರವನ್ನಾಗಿ ಮಾಡಿರಿ ಎಂದರು.

ನಗರದ ವೈದ್ಯರು ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗು ತೊರೆದು ರೋಗಿಗಳ ಆರೈಕೆ ಮಾಡುತ್ತಿದ್ದು ಅವರ ಕಾರ್ಯ ಮೆಚ್ಚುವಂತಹದ್ದು ಮತ್ತು ತಮಗೇನಾದರೂ ಚಿಕಿತ್ಸೆಯಲ್ಲಿ ಅಡತಡೆ ಉಂಟಾದರೆ ಬಾಗಲಕೋಟ ಜಿಲ್ಲಾ ಸಿಇಓ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ಮಾಡಲಾಗಿದೆ ಅವರನ್ನು ಸಂಪಕರ್ಿಸಿ ಇಲ್ಲ ನೇರವಾಗಿ ಜಿಲ್ಲಾಧಿಕಾರಿಗಳನ್ನಾದರೂ ಸಂಪಕರ್ಿಸಿ ಎಂದು ವೈದ್ಯರಿಗೆ ನಿದರ್ೇಶನ ನೀಡಿದರು. 

ಸಚಿವರು ನಗರದ ಒಟ್ಟು 5 ಕೋವಿಡ್ ಕೇಂದ್ರಗಳಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ ಸಂಜೆ ಸುರಿದ ಮಳೆಯಿಂದಾಗಿ ಭೇಟಿಯನ್ನು ಮೊಟಕುಗೊಳಿಸಿದರು. ಈ ಸಂದರ್ಭದಲ್ಲಿ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಅವರು ಸ್ಥಳದಲ್ಲಿಯೇ ಉಳಿದ ಕೋವಿಡ್ ಕೇಂದ್ರಗಳ ಹೆಚ್ಚಿನ ಮಾಹಿತಿಯನ್ನು ಹಾಗೂ ತಾವು ತೆಗೆದುಕೊಂಡ ಕ್ರಮಗಳ ಬಗ್ಗೆ ಉಸ್ತುವಾರಿ ಸಚಿವರಿಗೆ ತಿಳಿಸಿದರು. 

ಜಮಖಂಡಿ ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೋಳಿ, ತಾಲೂಕ ಆರೋಗ್ಯಧಿಕಾರಿ ಜಿ.ಗಲಗಲಿ, ವೆಂಕಟೇಶ ಆಸ್ಪತ್ರೆಯ ಡಾ. ಅಜಿತ ಕನಕರೆಡ್ಡಿ, ಮಾಜಿ ಪುರಸಭಾ ಅಧ್ಯಕ್ಷ ಜಿ ಎಸ್ ಗೊಂಬಿ, ಶಿವಾನಂದ ಅಂಗಡಿ, ಎಸ್ ಆರ್ ಹಿಪ್ಪರಗಿ ಇತರರು ಇದ್ದರು ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿಯವರು ಆಸ್ಪತ್ರೆಯ ವೈದ್ಯರೊಂದಿಗೆ ವ್ಯವಸ್ಥೆಯ ಕುರಿತು ಸಮಾಲೋಚನೆಯಲ್ಲಿ ತೊಡಗಿರುವುದು 

ಸುದ್ದಿ ಓದಿ