ಮೃತ ರೈತ ಕುಟುಂಬಗಳಿಗೆ ಪರಿಹಾರ ವಿತರಣೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ರೈತ ಕುಟುಂಬಕ್ಕೆ 5ಲಕ್ಷ. ಹಾವು ಕಡಿದು ಮೃತಪಟ್ಟ ರೈತ ಕುಟುಂಬಕ್ಕೆ 2ಲಕ್ಷ ಪರಿಹಾರ: ಶಾಸಕರಾದ ಡಾ. ಶೈಲೇಂದ್ರ

ಮೃತ  ರೈತ ಕುಟುಂಬಗಳಿಗೆ ಪರಿಹಾರ ವಿತರಣೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ರೈತ ಕುಟುಂಬಕ್ಕೆ 5ಲಕ್ಷ. ಹಾವು ಕಡಿದು ಮೃತಪಟ್ಟ ರೈತ ಕುಟುಂಬಕ್ಕೆ 2ಲಕ್ಷ ಪರಿಹಾರ: ಶಾಸಕರಾದ ಡಾ. ಶೈಲೇಂದ್ರ
Compensation distribution to the families of deceased farmers: 5 lakhs to the family of a farmer who

                     ಬೀದರ್ 29: ದಕ್ಷಿಣ ಕ್ಷೇತ್ರದ ಬಶೀರಾಪುರ ಗ್ರಾಮದ ರೈತ ಬಾಬು ಅವರು ಇತ್ತೀಚೆಗೆ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಾಗೆಯೇ ಹೊನ್ನಿಕೇರಿ ಗ್ರಾಮದ ರೈತ ರವೀಂದ್ರ ಅವರು ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಹಾವು ಕಡಿದು ಮೃತಪಟ್ಟಿದ್ದರು. ಈ ದುರ್ಘಟನೆಗಳಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಸರ್ಕಾರದಿಂದ ಶೀಘ್ರ ಪರಿಹಾರ ಒದಗಿಸುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ, ಆತ್ಮಹತ್ಯೆ ಮಾಡಿಕೊಂಡ ರೈತ ಬಾಬು ಅವರ ಪತ್ನಿ ದ್ರೌಪದಿ ಅವರಿಗೆ ?5ಲಕ್ಷ ಪರಿಹಾರ ಧನವನ್ನು ಹಾಗೂ ಹಾವು ಕಡಿದು ಮೃತಪಟ್ಟ ರೈತ ರವೀಂದ್ರ ಅವರ ಪತ್ನಿ ಶ್ರಿದೇವಿ ಅವರಿಗೆ ? 2ಲಕ್ಷ ಪರಿಹಾರ ಧನವನ್ನು ವಿತರಿಸಿ ಸಾಂತ್ವನ ಹೇಳಿ ಮಾತನಾಡಿದರು.

                     ಅಧಿಕಾರಿಗಳು ಸಹ ಕೃಷಿ ಹಾಗೂ ತೋಟಗಾರಿಕೆ ಕಾರ್ಯಕ್ರಮದಲ್ಲಿ  ರೈತರು ಆತ್ಮಹತ್ಯೆ ದಾರಿ ತುಳಿಯದಂತೆ  ಆತ್ಮಹತ್ಯೆಗೆ ಕಾರಣಗಳು ಮತ್ತು ತಡೆಯುವ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸಿ ಕೃಷಿ ಹಾಗೂ ತೋಟಗಾರಿಕೆ ಬೆಳೆಯಲ್ಲಿ ಮಿಶ್ರ ಬೇಸಾಯ ಮಾಹಿತಿ ನೀಡುವ ಮೂಲಕ ಕೃಷಿಯಲ್ಲಿ ಯಶಸ್ಸು ಕಂಡು ರೈತರನ್ನು ಲಾಭದಾಯಕವಾಗಿ ಮಾಡುವುದು ಅಧಿಕಾರಿಗಳ ಕರ್ತವ್ಯ ಈ ನಿಟ್ಟಿನಲ್ಲಿ ಅಧಿಕಾರಿಗಳು  ಶ್ರಮಿಸಬೇಕು ಎಂದರು.ರೈತನಿಗೆ ಧೈರ್ಯ ತುಂಬುವ ಕೆಲಸವಾಗಲಿರೈತನಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸಗಳು ಆಗಬೇಕು. ರೈತ ನೆಮ್ಮದಿಯಿಂದ ಬದುಕುವಂತಹ ವಾತಾವರಣ ಸೃಷ್ಟಿಯಾದಾಗ ರೈತ ಉನ್ನತ ಮಟ್ಟಕ್ಕೆ ಹೊಗಲು ಸಾಧ್ಯ. ಕ್ಷೇತ್ರದ ರೈತರಿಗೆ ಸಂಕಷ್ಟ ಎದುರಾದಂತಹ ಸಂದರ್ಭದಲ್ಲಿ ನಾನು ನಿಮ್ಮೊಂದಿಗೆ ಇದ್ದೇನೆ.

                    ಸರ್ಕಾರ ನಿಮ್ಮೊಟ್ಟಿಗೆ ಇದೆ. ಯಾವುದೇ ಕಾರಣಕ್ಕೂಎಲ್ಲ ಸಮಸ್ಯೆಗಳಿಗೆ ಸಾವು ಒಂದೇ ಅಂತಿಮ ಪರಿಹಾರವಲ್ಲ. ದೇಶಕ್ಕೆ ಅನ್ನ ನೀಡುವ ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಳ್ಳಬಾರದು, ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಅಲ್ಲ ಸಮಸ್ಯೆಗಳನ್ನು ಎದುರಿಸಿ ಬದುಕುವ ಶಕ್ತಿ ಹೊಂದಬೇಕು ಎನ್ನುವುದು ನನ್ನ ಕಳಕಳಿ ಮನವಿ  ನನ್ನ ಕ್ಷೇತ್ರದಲ್ಲಿ ರೈತ ಆತ್ಮಹತ್ಯೆ ಅಂತಹ ಘಟನೆಗಳು ನಡೆದದ್ದು ಬಹಳ ದುಃಖಕರ ಸಂಗತಿರೈತರು ಆರ್ಥಿಕವಾಗಿ ಸಬಲವಾಗುವರೆಗೂ ಸಾಲ ಪಾವತಿಸಲು ಒತ್ತಡ ಹಾಗೂ ಕಿರುಕುಳ ನೀಡದಂತೆ ಬ್ಯಾಂಕ್ಗಳಿಗೆ ಅಧಿಕಾರಿಗಳು ನಿರ್ದೇಶನ ನೀಡಬೇಕು.

                    ಜಿಲ್ಲೆಯ ರೈತರು ಯಾವುದೇ ಕಾರಣಕ್ಕೂ ಎದೆಗುಂದದೇ ಧೈರ್ಯವಾಗಿರುವಂತರಾಗಿರಬೇಕು , ರೈತರ ಕುಟುಂಬದ ಜೊತೆ ಸರ್ಕಾರ ಮತ್ತು ನಾನು ಇದ್ದೆವೆ, ಯಾವುದೇ ರೀತಿಯ ಸಹಾಯ ಬೇಕಾದಲ್ಲಿ ರೈತರು ಮುಕ್ತವಾಗಿ ತಹಶೀಲ್ದಾರ ಮೂಲಕ ಅರ್ಜಿ ಸಲ್ಲಿಸಿದ್ದಲ್ಲಿ ಆದ್ಯತೆ ಮೇಲೆ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದರು.ಈಗಾಗಲೇ  ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ವಿತರಿಸಲಾಗಿದ್ದು, ರೈತರು ಮರಣ ಹೊಂದಿದ ನಂತರ ರೈತನ ಪತ್ನಿಗೆ 5 ಲಕ್ಷ ಪರಿಹಾರ ಹಾಗೂ ಪ್ರತಿ ತಿಂಗಳು ರೂ. 2 ಸಾವಿರ ಮಾಸಾಶನ ಹಾಗೂ ಹಾವು ಕಡಿತದಿಂದ ಮೃತಪಟ್ಟ ರೈತರ ಪತ್ನಿಗೆ 2ಲಕ್ಷ ಪರಿಹಾರ ಹಾಗೂ ಮಾಸಾಶನ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳು ಒದಗಿಸಲಾಗಿದೆ.

                   ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸುರೇಶ್ ಮಾಶೆಟ್ಟಿ, ಬಸವರಾಜ ಚಟನಳ್ಳಿ, ಪುಂಡಲೀಕ ಟುಬಾಕ, ಸಚೀನ್ ಕೋಣಿ, ರಾಮು ಅಮಲಾಪುರ, ಬಸವರಾಜ ಹಿಲಾಲಪುರ, ವಿಜಯಕುಮಾರ ಗಣಪುರ, ಓಂಕಾರ್ ಮಜಗೆ, ಸಿದ್ದಯ್ಯ ಸ್ವಾಮಿ, ಗೋಪಾಲ ರೆಡ್ಡಿ, ಪರಮೇಶ ಪಾಟೀಲ, ಅನೀಲ್, ಶಿವಕುಮಾರ ಸುಲ್ತಾನಪುರ, ಸುರೇಶ ಪೊಲಕಪಳ್ಳಿ, ಓಂಕಾರ ಗುನ್ನಳ್ಳಿ, ಇಂದ್ರಾ ರೆಡ್ಡಿ, ಕುಪೇಂದ್ರ, ನಾಗಶೆಟ್ಟಿ, ಚೇತನ, ಬಸವರಾಜ,ಲಕ್ಷ್ಮಣ, ಮಹೇಶ ಮತ್ತಿತರರು ಉಪಸ್ಥಿತರಿದ್ದರು. ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರ ಮಾಧ್ಯಮ ಸಂಯೋಜಕ ಸಹಾಯಕ ನಾಗೇಶ ಸಿದ್ದಾ. 


ಸುದ್ದಿ ಓದಿ