ನೀರಾವರಿ ಸೌಲಭ್ಯ ಒದಗಿಸಲು ಕಾಮಗಾರಿ ಪ್ರಾರಂಭ
ರಾಮದುರ್ಗ ನವೆಂಬರ್ 28: ಹಿರೆಮೂಲಂಗಿ ಗ್ರಾಮದ ಹತ್ತಿರ ಮಲಪ್ರಭಾ ನದಿಯಿಂದಾ ಏತ ನೀರಾವರಿ ಮೂಲಕ ತಾಲೂಕಿನ ರೇವಡಿಕೊಪ್ಪ, ಹಂಪಿಹೋಳಿ ಹಾಗೂ ಕಿತ್ತೂರಿನ ಗ್ರಾಮಗಳ ಸುಮಾರು 1000 ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ರೂ. 600 ಕೋಟಿ ಮಂಜೂರ ಮಾಡಿಸಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಿನ ಸುರೇಬಾನ ಕೆಇಬಿ ಹತ್ತಿರ ರೂ. 600 ಕೋಟಿ ವೆಚ್ಚದ ಹಿರೇಮೂಲಂಗಿ ಏತ ನೀರಾವರಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಹಿರೇಮೂಲಂಗಿ ಗ್ರಾಮದಿಂದಾ ಸುಮಾರು 6 ಕಿಮಿ. ಪೈಪ್ಲೈನ ಮುಖಾಂತರ ಕಾಲುವೆಗಳಲ್ಲಿ ನೀರು ಹರಿಸಲಾಗುವುದು ಎಂದು ನುಡಿದರು. ತಾಲೂಕಿನ ಗೊಣ್ಣಾಗರ, ಚಿಂಚಕಂಡಿ ಇತರ ಕಡೆ ಯೋಜನೆ ಮಾಡಿದ ಏತ ನೀರಾವರಿಗಳಗೆ ನನ್ನ ಅವಧಿಯಲ್ಲಿಯೇ ಹಣ ಮಂಜೂರ ಮಾಡಿಸಿ ಕಾಮಗಾರಿಯನ್ನು ಪ್ರಾರಂಭಿಸುತ್ತೆನೆ ಎಂದು ಭರವಸೆ ನೀಡಿದರು.
ಕಾಮಗಾರಿ ನಡೆದ ಸಮಯದಲ್ಲಿ ರೈತರು ಸಹಕಾರ ನೀಡಬೇಕು ವಿನಾ ತಂಟೆ ತಕರಾರುಗಳಿಂದಾ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗಿ ಅಭಿವೃದಿಗೆ ಹಿನ್ನಡಯಾಗುತ್ತದೆ, ಕಳಪೆ ಎಂದು ಕಂಡು ಬಂದಲ್ಲಿ ಅಧಿಕಾರಿಗಳಸಿ ತಿಳಸಬೇಕು ಎಂದು ಸಲಹೆ ನೀಡಿದರು. ಅಧಿಕಾರಿಗಳೊಂದಿಗೆ ಚಚರ್ಿಸಿ ಮನಿಹಾಳದ ಗ್ರಾಮಕ್ಕೆ ಹಿರೆಮೂಲಂಗಿ ಏತ ನೀರಾವರಿಯ ಸೌಲಭ್ಯ ನೀಡಿಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ಭರವಸೆ ನೀಡಿ ಗ್ರಾಮಸ್ಥರು ಸಹಕರಿಸಬೇಕು ಎಂದು ವಿನಂತಿಸಿದರು.
ಅವರಾದಿ ಏತ ನೀರಾವರಿ ಯೋಜೆನೆಯ ಕಾಮಗಾರಿ ಕಳಪೆಯಾಗಿದ್ದರಿಂದಾ ಪೈಪಲೈನ ಹಾಳಗಿ ನೀರು ವ್ಯರ್ಥವಾಗುತ್ತದಲ್ಲದೆ ಬೆಳೆಗೆ ನುಗ್ಗಿ ಹಾಳಾಗುತ್ತದೆ ಇದು ಸರಿಪಡಿಸಿ ಇದೆ ಅವಧಿಯಲ್ಲಿ ಶಾಸಕರು ಉದ್ಘಾಟನೆ ಮಾಡಬೇಕು ಎಂದು ರೈತ ಮುಖಂಡ ಶಿವಪ್ಪ ಮೇಟಿ ಒತ್ತಾಯಿಸಿದಾಗ ಸಣ್ಣ ನೀರಾವರಿ ಇಲಾಖೆ ಕಾರ್ಯ ನಿವರ್ಾಹಕ ಅಭಿಯಂತರ ಎಸ್ ಎಸ್ ಮೆಳವಂಕಿ ಮಲಪ್ರಭಾ ಪ್ರವಾಹದಿಂದಾ ಮೋಟರಗಳಲ್ಲಿ ನೀರು ನುಗ್ಗಿ ಹಾಳಾಗಿದೆ ಹಾಗೂ ಅವರಾದಿ ಏತ ನೀರಾವರಿಯಿಂದಾ ಸರಿಯಾಗಿ ಆ ಭಾಗದ ರೈತರಿಗೆ ನೀರೊದಗಿಸಲು ರೂ. 30 ಲಕ್ಷದ ಟೆಂಡರ ಕರೆದು ಕಾಮಗಾರಿ ದುರಸ್ತಿಮಾಡಲು ಪ್ರಾಮಾಣಕ ಪ್ರಯತ್ನ ಮಾಡುತ್ತನೆ ಎಂದು ಸಭೆಗೆ ಭರವಸೆ ನೀಡಿದರು.
ಜಿಪಂ ಸದಸ್ಯೆ ಶಿವಕ್ಕಾ ಬೆಳವಡಿ, ಎಪಿಎಮ್ಸಿ ಅಧ್ಯಕ್ಷ ದ್ಯಾವಪ್ಪ ಬೆಳವಡಿ, ಮಾಜಿ ಜಿಪಂ ಸದಸ್ಯ ನಿಂಗಪ್ಪ ಮೆಲ್ಲಿಕೇರಿ, ಸಹಾಯಕ ಸಹಕಾರ ಕೃಷಿ ಪತ್ತಿನ ಬ್ಯಾಂಕ ಅಧ್ಯಕ್ಷ ಶಂಕರಗೌಡ ಪಾಟೀಲ, ಎಪಿಎಮ್ಸಿ ಸದಸ್ಯ ಗಿರಿಯಪ್ಪ ಹಣಸಿ, ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಎನ್ ಎಚ್ ಭಜಂತ್ರಿ ಉಪಸ್ಥಿತರಿದ್ದರು.