ಕಿಸ್ತವಾರ್ ಜಿಲ್ಲೆಯಲ್ಲಿ ಮೇಘ ಸ್ಫೋಟ, 40 ಜನರ ಕಣ್ಮರೆ..?

ಕಿಸ್ತವಾರ್  ಜಿಲ್ಲೆಯಲ್ಲಿ  ಮೇಘ ಸ್ಫೋಟ, 40 ಜನರ  ಕಣ್ಮರೆ..?

ಜಮ್ಮು, ಜುಲೈ 28 ಜಮ್ಮು ಮತ್ತು ಕಾಶ್ಮೀರದ ಕಿಸ್ತವಾರ್  ಜಿಲ್ಲೆಯ ಮೇಘ ಸ್ಫೋಟದಿಂದ ಹಳ್ಳಿಯ ಅನೇಕ ಸುಮಾರು 40 ಜನರು ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ.  
 
ಹಾಂಜಾರ್ ಗ್ರಾಮದಲ್ಲಿ ಮೋಡ ಸ್ಫೋಟ ಸಂಭವಿಸಿದ್ದು, ನಂತರ  35 ರಿಂದ 40 ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆ ಕುರಿತು  ಜಿಲ್ಲಾಧಿಕಾರಿ  ಅಶೋಕ್ ಶರ್ಮಾ,ಪ್ರತಿಕ್ರಿಯಿಸಿ ಘಟನೆ ಸಂಭವಿಸಿರುವುದು  ನಿಜವಾದರು ಇದು ದೂರದ ಹಳ್ಳಿಯಾಗಿದ್ದು, ಕಾಣೆಯಾದವರ ನಿಖರ ವಿವರಗಳು ಅಥವಾ ಯಾವುದೇ ಸಾವು-ನೋವಿನ ವಿವರ ಇನ್ನಷ್ಟೆ   ಲಭ್ಯವಾಗಬೇಕಿದೆ ಎಂದು ಹೇಳಿದರು.

ಸ್ಥಳಕ್ಕೆ ರಕ್ಷಣಾ  ತಂಡಗಳನ್ನು ಸ್ಥಳಕ್ಕೆ ರವಾನಿಸಲಾಗುತ್ತಿದೆ , ಇದು ಕೆಲವು ಕಿಲೋಮೀಟರ್‌ಗಳಷ್ಟು ಕಾಲ್ನಡಿಗೆಯಲ್ಲಿ ಪ್ರಯಾಣಿಸಿಬೇಕಿದೆ ದೆ ಆದರೂ  ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಈ ನಡುವೆ  ರಾಂಬನ್ ಜಿಲ್ಲೆಯ ಮತ್ತೊಂದು ಗ್ರಾಮದಲ್ಲಿ ಮೋಡ ಸ್ಫೊಟದ ಘಟನೆ ವರದಿಯಾಗಿದೆ ಎಂದೂ  ಹೇಳಲಾಗಿದೆ.

ಸುದ್ದಿ ಓದಿ