ಮಹಲಿಂಗಪುರ

ಗಣೇಶೋತ್ಸವಕ್ಕೆ ಹಾಕಿದ ಶಾಮೀಯಾನಗಳ ತೆರವು, ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಗಣೇಶೋತ್ಸವಕ್ಕೆ ಹಾಕಿದ ಶಾಮೀಯಾನಗಳ ತೆರವು, ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮಹಾಲಿಂಗಪುರ09: ನಗರದ ಪ್ರಮುಖ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಕುರಿತು ಹಾಕಲಾದ ಶಾಮೀಯಾನಗಳನ್ನು ಸ್ಥಳೀಯ ಆಡಳಿತ ತೆರವುಗೊಳಿಸಿದರ ಕ್ರಮವನ್ನು ಖಂಡಿಸಿ ವಿವಿಧ ಹಿಂದೂ ಪರ ಸಂಘಟನೆಗಳು ಗುರುವಾರ ಮುಂಜಾನೆ ಪ್ರತಿಭಟಿಸಿ ಪುರಸಭೆಗೆ ಘೇರಾವು ಹಾಕಿದವು.

ಬುಧವಾರ ರಾತ್ರಿ ದಿಢೀರ್ ರಾತ್ರೋರಾತ್ರಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಆದೇಶದಂತೆ ಪಟ್ಟಣದಲ್ಲಿ ಗಣೇಶೋತ್ಸವಕ್ಕೆ ಹಾಕಿದ ಎಲ್ಲ ಶಾಮಿಯಾನಗಳನ್ನು ತೆರವುಗೊಳಿಸಿದ ಕ್ರಮವನ್ನು ವಿರೋಧಿಸಿ ಸ್ಥಳೀಯ ಪುರಸಭೆಯ ಬಿಜೆಪಿ ಸದಸ್ಯರು, ಹಿಂದು ಸಂಘಟನೆ ಮುಖಂಡರು ಹಾಗೂ ಶ್ರೀರಾಮ ಸೇನೆ, ವಿಶ್ವ ಹಿಂದು ಪರಿಷತ್ತಿನ ಯುವ ನಾಯಕರು ಸಂಜೆ 5 ಗಂಟೆಯ ಒಳಗಾಗಿ ನಮಗೆ ಗಣಪತಿ ಪ್ರತಿಷ್ಠಾಪಿಸಲು ಅವಕಾಶ ನೀಡಿ, ಇಲ್ಲವೆ ನಾವು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಜ್ರಂಭಣೆಯಿಂದ ಉತ್ಸವವನ್ನು ಆಚರಿಸುತ್ತೇವೆ ಎಂದು ಆಡಳಿತ ಮತ್ತು ಪೆÇಲೀಸ್ ಇಲಾಖೆಗೆ ಖಡಕ್ ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ರವಿ ಜವಳಗಿ, ರಾಘು ಘರಗಟ್ಟಿ, ಗುರುಲಿಂಗಯ್ಯ ಮಠಪತಿ, ಮಂಜು ಸಿಂಪಿ, ಅನೀಲ ಕಿರಿಕಿರಿ, ನಂದೂ ಲಾತೂರ, ಶಿವಾನಂದ ಹುಣಶ್ಯಾಳ, ಭರತ ಕದ್ದಿಮನಿ, ಚೇತನ ಹುಣಶ್ಯಾಳ, ಮಹಾಂತೇಶ ಗುಡೇಜಾಡರ, ಅರ್ಜುನ ಪವಾರ, ಬಸವರಾಜ ಗಿರಿಸಾಗರ, ರಾಮು ತಾಳಿಕೋಟಿ, ಶಂಕರ ಸೊನ್ನದ, ಮಹಾಲಿಂಗ ಹೂಗಾರ, ಚನ್ನಪ್ಪ ಪಟ್ಟಣಶೆಟ್ಟಿ, ವಿನೋದ ಸಿಂಪಿ, ಚೇತನ ಬರಡೋಲ ಮುಂತಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ಸುದ್ದಿ ಓದಿ