ಡಾ.ಎಪಿಜೆ ಅಬ್ದುಲ್ ಕಲಾಂ ಶೈಕ್ಷಣಿಕ ಹಾಗೂ ಧಾರ್ಮಿಕ ಸೇವಾ ಸಂಸ್ಥೆಯಿಂದ ಸ್ವಚ್ಛತಾ ಕಾರ್ಯ!
Cleanliness drive by Dr. APJ Abdul Kalam Educational and Religious Service Institute!
ಲೋಕದರ್ಶನ ವರದಿ
ಮಹಾಲಿಂಗಪುರ 07: ಪಟ್ಟಣದ ಡಾ.ಎಪಿಜೆ ಅಬ್ದುಲ್ ಕಲಾಂ ಶೈಕ್ಷಣಿಕ ಹಾಗೂ ಧಾರ್ಮಿಕ ಸೇವಾ ಸಂಸ್ಥೆಯಿಂದ ಸ್ಥಳೀಯ ಬಸ್ ನಿಲ್ದಾಣದ ಕೆರೆಯ ಪಕ್ಕದಲ್ಲಿರುವ ಪುರಸಭೆ ವ್ಯಾಪ್ತಿಯ ಖುಲ್ಲಾ ಜಾಗದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಸಾರ್ವಜನಿಕರಿಂದ ಕಸ ಕಡ್ಡಿಗಳಿಂದ ತುಂಬಿಕೊಂಡು ದುರ್ವಾಸನೆ ಬೀರುತ್ತಿತ್ತು. ಪುರಸಭೆಯವರ ಗಮನಕ್ಕೆ ತಂದು ಅವರ ಅನುಮತಿಯೊಂದಿಗೆ ನಮ್ಮ ಸಂಸ್ಥೆಯ ಸರ್ವ ಸದಸ್ಯರು ಈ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದರು. ಒಂದು ವಿಶಾಲವಾದ ಮೈದಾನದಲ್ಲಿ ಸುತ್ತಮುತ್ತಲಿನ ಅಂಗಡಿಯವರಿಗೆ ಒಂದು ಸುಸಜ್ಜಿತವಾದ ಕಸದ ತೊಟ್ಟಿಯನ್ನು ನಿರ್ಮಿಸುವುದು ಹಾಗೂ ಉಳಿದ ಜಾಗದಲ್ಲಿ ಆಟದ ಮೈದಾನವನ್ನು ನಿರ್ಮಿಸಿ ನಗರದ ಸೌಂದರ್ಯವನ್ನು ಹೆಚ್ಚಿಸಲು ಸಹಕರಿಸಬೇಕೆಂದು ಆಗ್ರಹಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ. ಅಝಹರ್ ಕೋಲಾರ್, ಉಪಾಧ್ಯಕ್ಷ ಜಬಿವುಲ್ಲಾ ಮುಲ್ಲಾ, ಕಾರ್ಯದರ್ಶಿ ಯುನುಸ ಬೀಳಗಿ, ಸಹಕಾರ್ಯದರ್ಶಿ ಮುನ್ನಾ ಕರಡಿ, ಖಜಾಂಚಿ ಸೈಯದ್ ನದಾಫ್, ಸದಸ್ಯರಾದ ಭಾಷಾ ಬಿಸ್ತಿ, ಸೈಯದ್ ಹಳಂಗಳಿ, ಮೈಬೂಬ್ ಭಾಗವಾನ, ಶಾರುಖ್ ರೊಣ, ರಿಯಾಜ್ ಯಾದಗುಡ, ಹ್ಯಾರಿಸ್ ಶಿರೋಳ್, ಕುತುಬುದ್ದೀನ್ ಜಲಗೇರಿ, ಇಲಿಯಾಸ್ ಬೀಳಗಿ, ಜಾಕಿರ್ ಶೇಕ್, ಮೈಬೂಬ್ ಗಡ್ಡಿ, ಹಿರಿಯರಾದ ಮೋದಿನ ತಟಗಾರ, ಯುವಕರಾದ ಶಾಹಿದ್ ಕರಡಿ, ಮೂಸಾ ಬೂದಿಹಾಳ,ಗೌಸ್ ಬಿಳಗಿ, ಇಲಾಹಿ ಮುಲ್ಲಾ,ಆರೀಫ್ ಬಿಳಗಿ,ಮೈಬೂಬ್ ಬಿಸ್ತಿ, ಅಬುಬಕರ್ ಜಮಖಂಡಿ, ರಿಯಾಜ್ ಬರ್ಗಿ ಸೇರಿದಂತೆ ಇತರರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 