15ವರ್ಷಗಳ ನಂತರ ಜಾತ್ರೆಯಲ್ಲಿ ಒಂದಾದ ಸಹಪಾಠಿಗಳು
ಮಹಾಲಿಂಗಪುರ 09 : ಸ್ಥಳೀಯ ಸರ್ಕಾರಿ ಪ್ರೌಢ ಶಾಲೆಯಲ್ಲಿ 2009-10ರ ಎಸ್‌ಎಸ್‌ಎಲ್‌ಸಿ ಪಾಸಾದ ಹಳೇ ವಿದ್ಯಾರ್ಥಿಗಳು ಮಹಾಲಿಂಗಪುರದ ಶ್ರೀ ಗುರು ಮಹಾಲಿಂಗೇಶ್ವರ ಜಾತ್ರೆಗೆ ಬಂದಾಗ ಮತ್ತೆ ಒಂದಾಗಿ ಗ್ರುಪ್ ಫೋಟೋ ಕ್ಲಿಕ್ಕಿಸಿಕೊಂಡು ರುಚಿ-ರುಚಿಯಾದ ಅಡುಗೆ ಸವಿದು ಜಾತ್ರೆಯಲ್ಲಿ ನೆನಪಿನ ಯಾತ್ರೆ ಕೈಗೊಂಡ ಅನುಭವ ಪಡೆದರು.15 ವರ್ಷಗಳ ನಂತರ ಮತ್ತೆ ಒಂದಾದ ಸಹಪಾಠಿಗಳು ಸಭೆ ನಡೆಸಿದ್ದರು.
ಇದೇ ಸಂದರ್ಭದಲ್ಲಿ ಪತ್ರಕರ್ತ ಹಣಮಂತ ನಾವಿ, ವಕೀಲರಾದ ಅರ್ಜುನ ಪವಾರ,ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಸೂರಜ್ ಅವಟಿ, ಭರತ್ ಕದ್ಧಿಮನಿ, ಮಹೇಶ ನಾಯಕ,ನಂದೀಶ ಲಾತುರ,ಪ್ರೀತಿ ಖೋತ, ಮೇಘಾ ಹೊಸಕೋಟೆ, ಭೀಮಶಿ ದೊಡವಾಡ, ಆನಂದ ಪವಾರ,ಶಶಿ ಭದನೆಕಾಯಿ, ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ ಅನೇಕ ಸ್ನೇಹಿತರು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು.ಮುಂದಿನ ಗುರುವಂದನಾ ಕಾರ್ಯಕ್ರಮ ಮಾಡಿ ಗುರುಗಳಿಗೆ ಗೌರವ ಸಲ್ಲಿಸುವ ಬಗ್ಗೆ ಚರ್ಚಿಸಿದರು.