ಮಹಲಿಂಗಪುರ

ತಮ್ಮ ಆರೋಗ್ಯ ಲೆಕ್ಕಿಸದೆ ಪಟ್ಟಣದ ಆರೋಗ್ಯ ಕಾಳಜಿ ಮಾಡುವವರು ಪೌರಕಾರ್ಮಿಕರು: ಪಾಟೀಲ್

ತಮ್ಮ ಆರೋಗ್ಯ ಲೆಕ್ಕಿಸದೆ ಪಟ್ಟಣದ ಆರೋಗ್ಯ ಕಾಳಜಿ ಮಾಡುವವರು ಪೌರಕಾರ್ಮಿಕರು: ಪಾಟೀಲ್

ಮಹಾಲಿಂಗಪುರ 23: ತಮ್ಮ ಆರೋಗ್ಯ ಲೆಕ್ಕಿಸದೆ ಪಟ್ಟಣದ ಪ್ರತಿಯೊಬ್ಬರ ಆರೋಗ್ಯ ಕಾಳಜಿ ಮಾಡುವವರು ಯಾರಾದರೂ ಇದ್ದರೆ ಅದು ಪೌರಕಾರ್ಮಿಕರು ಮಾತ್ರ. ಅವರು ನಮ್ಮ ಪರಿವಾರದ ಸದಸ್ಯರಿದ್ದಂತೆ ಅವರ ಜೊತೆಯಲ್ಲಿ ನಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಪುರಸಭೆಯ ಸ್ಥಾಯಿ ಸಮಿತಿ ಚೇರ್ಮನ್ ಬಲವಂತಗೌಡ ಪಾಟೀಲ್ ಹೇಳಿದರು. 

ಗುರುವಾರ ಮಧ್ಯಾಹ್ನ ಶಿವಶರಣ ಮಾದರ ಚೆನ್ನಯ್ಯ ಸಮುದಾಯ ಭವನದಲ್ಲಿ ಪೌರ ಕಾರ್ಮಿಕರು, ಪುರಸಭೆ ಅಧಿಕಾರಿಗಳು, ರಾಜಕೀಯ ಹಿತೈಷಿಗಳು ಮತ್ತು ಸಿಬ್ಬಂದಿಗಳ ಜೊತೆ ರಾಜೇಶ್ ಭಾವಿಕಟ್ಟಿ 46 ಮತ್ತು ತಮ್ಮ 36ನೆಯ ಹುಟ್ಟು ಹಬ್ಬವನ್ನು ಆಚರಿಸಿಕ್ಕೊಂಡ ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರು ವೇತನ ಪಡೆಯುತ್ತಿರಬಹುದು. ಆದರೆ ಅವರು ಪ್ರತಿ ದಿನ ದುರ್ಗಮ ಮತ್ತು ದುಗಂರ್ಧ ವಾತಾವರಣದಲ್ಲಿ ಕೆಲಸ ಮಾಡಬೇಕಾಗುತ್ತದೆ. ಇಂತಹದರಲ್ಲಿ ಅವರ ಆರೋಗ್ಯ ಅಪಾಯದಲ್ಲಿ ಸಿಲುಕುವ ಭಯವಿರುತ್ತದೆ ಅಲ್ಲದೆ ಅನೇಕ ಕಡೆಗಳಲ್ಲಿ ಪೌರ ಕಾರ್ಮಿಕರು ಪ್ರಾಣ ಕಳೆದುಕೊಂಡ ಅನೇಕ ಉದಾಹರಣೆಗಳಿವೆ. ಸಾರ್ವಜನಿಕರಿಗೆ ಮುಡಿಪಾಗಿಟ್ಟ ಇವರ ತ್ಯಾಗವನ್ನು ಎಷ್ಟು ಹೊಗಳಿದರೂ ಕಡಿಮೆಯೇ ಎಂದರು. 

ಪೌರಕಾರ್ಮಿಕರಾದಿಯಾಗಿ ಪುರಸಭೆಯ ಎಲ್ಲರೂ ಸೇರಿ ರಾಜೇಶ ಭಾವಿಕಟ್ಟಿ ಮತ್ತು ಬಲವಂತಗೌಡ ಪಾಟೀಲ್ ಅವರಿಗೆ ಗೌರವ ಸನ್ಮಾನ ನೀಡಿದರು. ನಂತರ ಕಾರ್ಯಕ್ರಮದಲ್ಲಿ ಸೇರಿದವರೆಲ್ಲ ಪ್ರಭು ಮಲಾಬಾದಿ ಅವರ ವ್ಯವಸ್ಥೆಯ ಭೋಜನ ಸವಿದು, ಹುಟ್ಟು ಹಬ್ಬ ಆಚರಿಸಿಕೊಂಡ ಮಹನೀಯರಿಗೆ ಶುಭಾಶಯಗಳನ್ನು ಕೋರಿದರು.  

ಪುರಸಭೆ ವ್ಯವಸ್ಥಾಪಕ ಎಸ್ ಎನ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಲೆಕ್ಕ ಪರಿಶೋಧಕ ಕುಲಕರ್ಣಿ ಮತ್ತು ರವಿ ಹಲಸಪ್ಪಗೋಳ ಮಾತನಾಡಿದರು. ಮುಖಂಡರಾದ ಅರ್ಜುನ್ ದೊಡಮನಿ, ವಿಠಲ ಕುಳಲಿ, ಲಕ್ಷ್ಮಣ ಮಾಂಗ್, ಶಂಕರಗೌಡ ಪಾಟೀಲ, ಈಶ್ವರ ಚಮಕೇರಿ, ರಾಮಣ್ಣ ಹಟ್ಟಿ, ಮಹಾಲಿಂಗಪ್ಪ ಮಾಳಿ, ಶಿವು ಕಡಬಲ್ಲವರ್, ಪ್ರಭು ಮಲಾಬಾದಿ, ಈರಣ್ಣ ಸೊನ್ನದ, ಶಂಕರ ಸೊನ್ನದ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮತ್ತು ರಾಜು ಹೂಗಾರ, ಎಂ ಎಸ್ ಮುಗಳಖೋಡ ಸಿಬ್ಬಂದಿ ಸಿಪಾಯಿ ರಾಮು, ಮಹಾಲಿಂಗ ಮಾಂಗ, ರಂಗಾ ಹಲಸಪ್ಪಗೋಳ, ಲಕನ್ ದೊಡಮನಿ, ಚಂದ್ರವ್ವ ಮಾವಿನಹಿಂಡಿ, ಯಲ್ಲವ್ವ ಮಾಂಗ ಮುಂತಾದವರಿದ್ದರು. 


ಸುದ್ದಿ ಓದಿ