ಮೇ 28ರಿಂದ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ
ಸಿಂದಗಿ26: ಪಟ್ಟಣದ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಮೇ 28 ರಿಂದ 30ರವರೆಗೆ ವೈವಿದ್ಯಮಯ ಕಾರ್ಯಕ್ರಮಗಳು ಜರಗುವವು. ಮೇ 28 ರಂದು ಸಾಯಂಕಾಲ 4 ಗಂಟೆಗೆ ಪಟ್ಟಣದ ಮೂಲ ದೇವಸ್ಥಾನದಿಂದ ನೂತನ ದೇವಸ್ಥಾನಕ್ಕೆ ಶ್ರೀ ಚೌಡೇಶ್ವರಿ ದೇವಿಯ ಪಲ್ಲಕ್ಕಿ ಉತ್ಸವ ಜರಗುವುದು. ಮೇ 29 ರಂದು ಸಾಯಂಕಾಲ 4 ಗಂಟೆಗೆ ಪುರವಂತರ ಸೇವೆಯೊಂದಿಗೆ ದೇವಿಯು ಗಂಗಾ ಸ್ಥಳಕ್ಕೆ ಹೋಗಿ ಬರುವಳು. ರಾತ್ರಿ 12 ಗಂಟೆಗೆ ಬಾಳ ಬಟ್ಟಲು ಕಾರ್ಯಕ್ರಮ ಜರಗುವುದು. ಮೇ 30 ಸಾಯಂಕಾಲ 4 ಗಂಟೆಗೆ ಜಾತ್ರಾ ಮಹೋತ್ಸವ ಜರಗುವುದು. ಜಾತ್ರೆಯಲ್ಲಿ ವಿವಿಧ ವಾಧ್ಯಗಳ ಕಲಾವಿಧರು ಭಾಗವಹಿಸುವರು. ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ದೇವಿ ಕೃಪಾಶೀರ್ವಾದ ಪಡೆಯಬೇಕು ಎಂದು ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.