ಎಲಬುರ್ಗ

ಗ್ರಾಮೀಣ ಪ್ರದೇಶದ ಮಕ್ಕಳಿಗೂ ಕಂಪ್ಯೂಟರ್ ಜ್ಞಾನ ಅವಶ್ಯ

ಗ್ರಾಮೀಣ ಪ್ರದೇಶದ  ಮಕ್ಕಳಿಗೂ ಕಂಪ್ಯೂಟರ್ ಜ್ಞಾನ ಅವಶ್ಯ

ಯಲಬುರ್ಗಾ 14: ತಾಲೂಕಿನ ಕುಡಗುಂಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಝೆರಾಕ್ಸ್‌ ಯಂತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.    

ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೂ ಕಂಪ್ಯೂಟರ್ ಮೂಲಕ ಅಂತರ್ಜಾಲ ಶಿಕ್ಷಣ ಒದಗಿಸಲು ಶಿಕ್ಷಣ ಇಲಾಖೆ ಮುಂದಾಗಬೇಕೆಂದು ಶಿಕ್ಷಣ ಪ್ರೇಮಿ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಗದ್ದೆಯ್ಯ ಮ್ಯಾಗಳಮಠ ಅಭಿಪ್ರಾಯ ಪಟ್ಟರು ತಾಲೂಕಿನ ಕುಡಗುಂಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕಂಪ್ಯೂಟರ್ ಹಾಗೂ ಝರಾಕ್ಸ್‌ ಯಂತ್ರ ನೀಡಿ ಮಾತನಾಡಿದ ಅವರು ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆ ಇರುವ ಇಂದಿನ ದಿನಮಾನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿರುವ ಮಕ್ಕಳು ಕಂಪ್ಯೂಟರ್ ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾಗುತ್ತಿದ್ದಾರೆ ಎಂದರು.  

ಶಾಲೆಯ ಮುಖ್ಯ ಶಿಕ್ಷಕರಾದ ನಿಂಗಪ್ಪ ನಡುಲಮನಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸರಕಾರ ಪ್ರತಿಯೊಂದು ಮಗುವಿಗೆ ಕಂಪ್ಯೂಟರ್ ಶಿಕ್ಷಣ ನೀಡುವಲ್ಲಿ ಮುಂದಾಗಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದರು ಶಾಲಾ ಮೇಲುಸ್ತುವಾರಿ ಸಮಿತಿಯ ಅದ್ಯಕ್ಷ ಶಾರದಾ ಶಂಕ್ರ​‍್ಪ ಸಣ್ಣಖರಡ ,ಸದಸ್ಯರುಗಳಾದ ಹಿರೇಹನಮಪ್ಪ ಬೊಮ್ಮನಾಳ, ನಾಗಯ್ಯ ಹಿರೇಮಠ, ಕರಿಯಪ್ಪ ಕುರಿ,ಸಹ ಶಿಕ್ಷಕರಾದ ಶರಣಪ್ಪ ಇಟಗಿ,ಮಹಾಲಿಂಗಪ್ಪ ಉಳ್ಳಾಗಡ್ಡಿ ಎಸ್‌.ಆರ್ .ಬಗಲಿ ಸಕ್ರ​‍್ಪ ಕುಂಟರ  ಯುವ ಮುಖಂಡ ಬಸವರಾಜ ಬೊಮ್ಮನಾಳ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. 


ಸುದ್ದಿ ಓದಿ