ರಾಮದುರ್ಗ

ಶ್ರೀಗಳ ದರ್ಶನದಿಂದ ಮಕ್ಕಳು ರೋಗ ಮುಕ್ತರಾಗುತ್ತಿದ್ದದ್ದು ಪವಾಡ: ಯಾದವಾಡ

ಶ್ರೀಗಳ ದರ್ಶನದಿಂದ ಮಕ್ಕಳು ರೋಗ ಮುಕ್ತರಾಗುತ್ತಿದ್ದದ್ದು ಪವಾಡ: ಯಾದವಾಡ
ತಾಲೂಕಿನ ತೊಂಡಿಕಟ್ಟಿ ಗ್ರಾಮದ ಅವಧೂತ ಗಾಳೇಶ್ವರ ಮಠದ ಪೀಠಾಧಿಪತಿ ಪುಂಡಲಿಕ ಮಹಾರಾಜರು ಲಿಂಗೈಕ್ಯರಾದ ನಿಮಿತ್ಯ ಮಠದ ಆವರಣ

ರಾಮದುರ್ಗ 3: ಮಹಾನ ತಪಸ್ವಿಗಳು, ಸಂತರು ಸಾಧು ಸತ್ಪುರಷರು, ಯೋಗಿಗಳು ಹಾಗೂ ತ್ರಿಕಾಲ ಜ್ಞಾನಿಗಳನ್ನೊಳಗೊಂಡ ನಮ್ಮ ದೇಶವು ಆದಿಕಾಲದಿಂದಲೂ ವಿಶ್ವದಲ್ಲಿಯೇ ಪೂಜ್ಯನೀಯ ಸ್ಥಾನವನ್ನು ಪಡೆದಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. 

ತಾಲೂಕಿನ ತೊಂಡಿಕಟ್ಟಿ ಗ್ರಾಮದ ಅವಧೂತ ಗಾಳೇಶ್ವರ ಮಠದ ಪೀಠಾಧಿಪತಿ ಪುಂಡಲೀಕ ಮಹಾರಾಜರು ಲಿಂಗೈಕ್ಯರಾದ ನಿಮಿತ್ಯ ಮಠದ ಆವರಣದಲ್ಲಿ ಭಕ್ತ ಸಮೂಹವನ್ನುದ್ದೇಶಿಸಿ ಮಾತನಾಡಿದ ಅವರು ಪೂಜ್ಯರ ದರ್ಶನ ಪಡೆಯಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದಾ ಭಕ್ತರು ಬರುತ್ತಿದ್ದರು. ಅತ್ಯಂತ್ಯ ಸರಳತೆಯಂದಾ ದರ್ಶನ ಭಾಗ್ಯ ನೀಡುತ್ತಿದ್ದರು. ಮಹಾನ ತಪಸ್ವಿಗಳಾಗಿದ್ದ ಶ್ರೀಗಳ ದರ್ಶನದಿಂದಾ ಮಕ್ಕಳು ರೋಗ ಮುಕ್ತರಾಗುತ್ತಿದ್ದದ್ದು ಒಂದು ಪವಾಡವೇ ಸರಿ ಎಂದು ಗುಣಗಾನ ಮಾಡಿದರು. 

ತೊಂಡಿಕಟ್ಟಿಗೆ ಬಂದಾಗಲೆಲ್ಲಾ ಮಠಕ್ಕೆ ಬಂದು ಶ್ರೀಗಳ ದರ್ಶನ ಪಡೆಯುವ ಪದ್ಧತಿ ನನ್ನದಾಗಿದೆ. ಗ್ರಾಮಸ್ಥರು ಮಠದ ಅಭಿವೃದ್ಧಿಗೆ ಎಲ್ಲರೂ ಪಕ್ಷಬೇಧ ಮರೆತು ಶ್ರಮಿಸಬೇಕು ಎಂದು ಸಲಹೆ ನೀಡಿದರು. ಶ್ರೀಮಠದ ಅಧಿಕಾರ ಸ್ವೀಕರಿಸುವ ವೆಂಕಟೇಶ ಮಹಾರಾಜರಲ್ಲಿ ನಾವೆಲ್ಲ ಪುಂಡಲೀಕ ಮಹಾರಾಜರನ್ನು ಕಾಣೋನ ಅವರ ಎಲ್ಲ ಶಕ್ತಿಯನ್ನು ವೆಂಕಟೇಶ ಮಹಾರಾಜರಿಗೆ ದಯಪಾಲಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಿಡಿಸಿದರು. 

ನೇಸರಗಿ ಮಲ್ಲಾಪೂರದ ಚಿದಾನಂದ ಮಹಾಸ್ವಾಮಿಗಳು, ಪಿ ಜಿ ಹುಣಶ್ಯಾಳದ ನಿಜಗುಣ ದೇವರು, ಹೋಸಕೋಟಿಯ ರೇವಯ್ಯಾ ಸ್ವಾಮಿಗಳು, ಹಳಕಟ್ಟಿಯ ನಜಾನಂದ ಮಹಾಸ್ವಾಮಿಗಳು ಹಾಗೂ ನೆರೆಯ ಮಠಾಧೀಶರು, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಲೋಕಸಭೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ, ಜಿಲ್ಲಾ ಪಂಚಾಯತ ಸದಸ್ಯರಾದ ರಮೇಶ ದೇಶಪಾಂಡೆ, ಮಾರುತಿ ತುಪ್ಪದ ಅಂತಿಮ ದರ್ಶನ ಪಡೆದರು. 

ಸುದ್ದಿ ಓದಿ