ಮಕ್ಕಳ ಆರೋಗ್ಯ ತಪಾಸಣೆ
ಯಲಬುರ್ಗಾ ಸೆಪ್ಟೆಂಬರ್ 29 : ಪಟ್ಟಣದ 1 ಮತ್ತು 3 ನೇ ಅಂಗನವಾಡಿ ಕೇಂದ್ರದಲ್ಲಿ 0 ದಿಂದ 6 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಮಂಗಳವಾರ ನಡೆಯಿತು.
ಇಲ್ಲಿಯ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶೇಖರ ಭಜಂತ್ರಿ ಅವರು ಮಕ್ಕಳ ಆರೋಗ್ಯ ಬಗ್ಗೆ ತಪಾಸಣೆ ನಡೆಸಿ,ಮಕ್ಕಳ ಆರೋಗ್ಯ ಕಡೆ ಗಮನ ಹರಿಸಿ ಪೌಷ್ಠಿಕ ಆಹಾರ ಸೇವಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಶಿಲ್ಪಾ ಭಜಂತ್ರಿ,ಶ್ರೀದೇವಿ,ಅಂಗನವಾಡಿ ಕಾರ್ಯಕರ್ತೆ ಶಾಂತ ಹಡಪದ,ಪಾರ್ವತಿ ಛಲವಾದಿ,ಯಮನಮ್ಮ,ಆಶಾ ಕಾರ್ಯಕರ್ತೆ ಸುಜಾತ ಮುಧೋಳ ಭಾಗವಹಿಸಿದ್ದರು.