ಕಸಾಪದಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ
ಲೋಕದರ್ಶನ ವರದಿ
ಮುಂಡಗೋಡ:ತಾಲೂಕಿನ ಅಂದಲಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಗ್ರಾಮದ ದಿ.ಎಸ್.ಆರ್.ಪಾಟೀಲ ದತ್ತಿ ನೀಲವ್ವ ಗೌಡಶಾನಿ ಶಿವನಗೌಡ ಪಾಟೀಲ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ಸಹದೇವಪ್ಪ ನಡಿಗೇರ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ನಾಗರಾಜ ಹರಿಜನ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಾಹಿತಿ ಚಿದಾನಂದ ಪಾಟೀಲ, ಸಂಗಪ್ಪ ಕೋಳುರ, ಶೇಖಪ್ಪ ಕಲಕೇರಿ, ನಾರಾಯಣ ಅಂದಲಗಿ, ರಾಮು ಬೆಳ್ಳೆನವರ, ನಾಗರಾಜ ಕಲಾಲ, ಮಹೇಶ ಉಮ್ಮಚಗಿ, ಅಪ್ಪಣ್ಣ ಕಲಾಲ ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಎಸ್.ಬಿ.ಹೂಗಾರ ಸ್ವಾಗತಿಸಿದರು. ಶಿಕ್ಷಕ ನಾಗರಾಜ ಅರ್ಕಸಾಲಿ ಉಪನ್ಯಾಸಕರನ್ನು ಪರಿಚಯಿಸಿಕೊಟ್ಟರು. ಎಸ್.ಡಿ.ಮುಡೆಣ್ಣವರ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕ ಮಂಜುನಾಥ ಯಾಜಿ ವಂದಿಸಿದರು.