ಚೆಸ್ ರಾಜ್ಯಮಟ್ಟಕ್ಕೆ ಮಹಿ ಭಟ್ ಆಯ್ಕೆ
ಚೆಸ್ ರಾಜ್ಯಮಟ್ಟಕ್ಕೆ ಮಹಿ ಭಟ್ ಆಯ್ಕೆ
ಶಿಗ್ಗಾವಿ 12: ಹಾವೇರಿಯಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪಟ್ಟಣದ ದಿಶಾ ಇಂಟರ್ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಹಿ ರಮಾಕಾಂತ್ ಭಟ್ ಚೆಸ್ ಕ್ರೀಡಾಕೂಟದಲ್ಲಿ ವಿಜಯಿಯಾಗಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಶುಭಾಶಯ ಕೋರಿದ್ದಾರೆ.