ಮಧ್ಯ ಇಂಡೋನೇಷ್ಯಾ : 5.6 ತೀವ್ರತೆಯ ಭೂಕಂಪ
ಜಕಾರ್ತ, ಆಗಸ್ಟ್ 05 ಇಂಡೋನೇಷ್ಯಾದ ಮಧ್ಯ ಭಾಗದಲ್ಲಿರುವ ಪೂರ್ವ ನುಸಾ ತೆಂಗರ ಪ್ರಾಂತ್ಯದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಮತ್ತು ಭೂ ಭೌತಶಾಸ್ತ್ರ ಸಂಸ್ಥೆ ತಿಳಿಸಿದೆ.
ಭೂಕಂಪವು ಸ್ಥಳೀಯ ಕಾಲಮಾನಕ್ಕೆ ಅನುಗುಣವಾಗಿ ಮಧ್ಯಾಹ್ನ 12 ಗಂಟೆ 06 ನಿಮಿಷಕ್ಕೆ ಅಪ್ಪಳಿಸಿದೆ. ಫ್ಲೋರೆಸ್ ತೈಮೂರ್ ಜಿಲ್ಲೆಯ 62 ಕಿಮೀ ವಾಯುವ್ಯ ಲಾರಂಟುಕಾ ಉಪ ಜಿಲ್ಲೆಯ ಕೇಂದ್ರಬಿಂದುವಾಗಿದ್ದು, ಸಮುದ್ರದ ತಳದಲ್ಲಿ 540 ಕಿಮೀ ಆಳದಲ್ಲಿದೆ ಎಂದು ಗುರುತಿಸಲಾಗಿದೆ.
ಭೂಕಂಪವು ಪ್ರಬಲ ಸುನಾಮಿಗೆ ಕಾರಣವಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.