ಶಿವಶರಣ ಮೇದಾರ ಕೇತಯ್ಯನವರ ಜಯಂತಿ ಆಚರಣೆ
ಮಹಾಲಿಂಗಪುರ:ಸೋಮವಾರ ಮುಂಜಾನೆ ಪಟ್ಟಣದ ಮೇದಾರ ಬಡಾವಣೆಯಲ್ಲಿ ಗುರು ಮೇದಾರ ಕೇತೇಶ್ವರ ಗಿರಿಜನ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶಿವಶರಣ ಮೇದಾರ ಕೇತಯ್ಯನವರ 893ನೇ ಜಯಂತಿ ಆಚರಣೆ ನಡೆಯಿತು.
ಮೇದಾರ ಸಂಘದ ಅಧ್ಯಕ್ಷ ಹಣ್ಮಂತ ಮೇದರ ಮಾತನಾಡಿ, ಕೇತಯ್ಯನವರು ಬಸವಣ್ಣನವರ ಆಪ್ತ ಶರಣರಲ್ಲಿ ಒಬ್ಬರಾಗಿ, ಐತಿಹಾಸಿಕ ವ್ಯಕ್ತಿ ಎನಿಸಿಕ್ಕೊಂಡವರು. ಇತಿಹಾಸಕಾರರ ಪ್ರಕಾರ ಇವರ ಜೀವಿತಾವಧಿಯು 12ನೇ ಶತಮಾನವೆಂದು ಗುರುತಿಸಿದ್ದು ಇಂದಿಗೆ 893 ಸಂವತ್ಸರಗಳು ಕಳೆದಂತಾಗಿವೆ.
ಶರಣ ಶ್ರೇಷ್ಠರನ್ನು ಅಂದು ಕೇತ, ಕೇತಿದೇವ, ಕೇತಯ್ಯ, ಕ್ಯಾತಯ್ಯ, ಕೇತತಂದೆ, ಕೇತಿದೇವಯ್ಯ ಎಂಬ ಹಲವಾರು ಹೆಸರುಗಳಿಂದ ಕರೆಯಲ್ಪಟ್ಟರು. ಇವರು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಸಮಾನತೆಗಾಗಿ ಹೋರಾಟ ಮಾಡಿದ ಬಸವ ಪ್ರಮಥರ ಅನುಭವ ಮಂಟಪದ ಮಹಾಚೇತನರೂ ಇವರಾಗಿದ್ದಾರೆ.
ಸಮುದಾಯದ ಆರತಿವೆತ್ತ ಮಹಿಳೆಯರು ಹಾಗೂ ಪುರುಷರು ತಳಿರು ತೋರಣಗಳಿಂದ ಶೃಂಗರಿಸಿದ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶೃಧ್ಧೆ, ಭಕ್ತಿಯೊಂದಿಗೆ ಆಚರಿಸಿದ ಬಸವ ಶರಣ ಮೇದಾರ ಕೇತಯ್ಯನವರ ಜಯಂತಿ ಅರ್ಥಪೂರ್ಣವಾಗಿತ್ತು.
ಈ ಸಮಯದಲ್ಲಿ ಅಧ್ಯಕ್ಷ ಹನುಮಂತ ಬುರುಡ, ಉಪಾಧ್ಯಕ್ಷ ಗಂಗಪ್ಪ ಬುರುಡ ಶಿವಾನಂದ ಬುರುಡ, ಭೀಮಶಿ ಬುರುಡ, ಪರಶುರಾಮ ಬುರುಡ, ರವಿ ಬುರುಡ, ಮಲ್ಲಪ್ಪ ಬುರುಡ, ಈರಪ್ಪ ಬುರುಡ, ಮಹಾಂತೇಶ ಬುರುಡ, ಪ್ರಭು ಬುರುಡ, ಗಂಗಾಧರ ಬುರುಡ, ವೆಂಕಟೇಶ್ ಬುರುಡ, ಶಶಿಕಾಂತ ಬುರುಡ, ಸಂಗಮೇಶ ಬುರುಡ, ಹಣ್ಮಂತ ದುಂ.ಬುರುಡ, ನಾಗಪ್ಪ ಬುರುಡ, ಶಂಕರ ಬುರುಡ, ಮಹಾಲಿಂಗ ಬುರುಡ, ಬಸು ಬುರುಡ ಮುಂತಾದವರಿದ್ದರು.