ಮಹಲಿಂಗಪುರ

ಭಕ್ತಿಭಾವದಿಂದ ರಾಯರ ಆರಾಧನಾ ಮಹೋತ್ಸವ ಆಚರಣೆ

ಭಕ್ತಿಭಾವದಿಂದ ರಾಯರ ಆರಾಧನಾ ಮಹೋತ್ಸವ ಆಚರಣೆ

ಲೋಕದರ್ಶನ ವರದಿ 

ಮಹಾಲಿಂಗಪುರ 5: ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದ ಮಹಾಲಿಂಗಪುರ ಶಾಖೆಯ 16ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಾಯರ ಆರಾಧನಾ ಮಹೋತ್ಸವವನ್ನು ಬುಧವಾರ ಭಕ್ತಿಭಾವದಿಂದ ಆಚರಿಸಲಾಯಿತು. 

ಪ್ರಧಾನ ಅರ್ಚಕ ಮುರಳಿಧರ ಆಚಾರ್ಯ ಅವರ ನೇತೃತ್ವದಲ್ಲಿ ಬೆಳಗ್ಗೆಯಿಂದಲೇ ನಿರ್ಮಲ್ಯ, ಪಂಚಾಮೃತಾಭಿಷೇಕ, ಹಸ್ತೋದಕ, ವಿಶೇಷ ಅಭಿಷೇಕ, ಪೂಜೆ, ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ನಂತರ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು. 

ಮಠದ ವಿಚಾರಣಕರ್ತ ಶಂಕರರಾವ್ ಕುಲಕರ್ಣಿ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ರಾಘವೇಂದ್ರ ಸ್ವಾಮಿಗಳ ಕೃಪೆಗೆ ಪಾತ್ರರಾದರು. ಭಕ್ತರ ಜಯಘೋಷ ಹಾಗೂ ಭಜನೆಗಳ ನಡುವೆ ನಡೆದ ಧಾರ್ಮಿಕ ಕಾರ್ಯಕ್ರಮಗಳು ಆಧ್ಯಾತ್ಮಿಕ ವಾತಾವರಣವನ್ನು ನಿರ್ಮಿಸಿದವು. 


ಸುದ್ದಿ ಓದಿ