ಗೋಮಟೇಶ ವಿದ್ಯಾಪೀಠದಲ್ಲಿ ಭದ್ರಬಾಹು ಮಹಾರಾಜರ ಪುಣ್ಯತಿಥಿ ಆಚರಣೆ
ಬೆಳಗಾವಿ 17: ಸ್ಥಳಿಯ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಲ್ಲಿ ಗುರುವಾರ ದಿ. 17ರಂದು ವಿದ್ಯಾಪೀಠದ ಸಂಸ್ಥಾಪಕ ಅಧಿಷ್ಠಾತಾ, ಜ್ಞಾನಯೋಗಿ ಶಿಕ್ಷಣಮಹರ್ಷಿ ಜಿನೈಕ್ಯ ಭದ್ರಬಾಹು ಮಹಾರಾಜರ 25ನೇ ಪುಣ್ಯ ತಿಥಿಯನ್ನು ಶ್ರದ್ದಾ ಭಕ್ತಿಗಳಿಂದ ಆಚರಿಸಲಾಯಿತು.
ಗೋಮಟೇಶ ವಿದ್ಯಾಪೀಠದ ಅಧಿಷ್ಠಾತಾ ಹಾಗೂ ಬೆಳಗಾವಿ ಗ್ರಾಮೀಣ ವಿಧಾನ ಸಭಾ ಮತ ಕ್ಷೇತ್ರದ ಮಾಜಿ ಶಾಸಕರು ಹಾಗೂ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಭಾಜಪಾ ಅಧ್ಯಕ್ಷ ಸಂಜಯ ಬಿ ಪಾಟೀಲ ಅವರು ಸ್ವಾಮಿಜೀಯವರ ಮೂರ್ತಿಗೆ ಮಾಲಾರೆ್ಣ ಮಾಡಿ ಗೌರವವನ್ನು ಅರ್ಿಸಿದರು.
ವಿದ್ಯಾಪೀಠದ ನಿರ್ದೇಶಕರುಗಳಾದ ಸನತ್ ಕುಮಾರ ವ್ಹಿ. ವಿ. ಹಾಗೂ ರಾಜೇಶ ಪಾಟೀಲ, ಬಾಪುಸೋ ಪಾಟೀಲ, ಅಭಯ ಅವಲಕ್ಕಿ ಅವರು ಉಪಸ್ಥಿತರಿದ್ದರು. ವಿದ್ಯಾಪೀಠದ ಹಿತೈಸಿಗಳು ಮತ್ತು ಸಂಸ್ಥೆಯ ವಿವಿಧ ಶಾಖೆಗಳ ಪ್ರಾಂಶುಪಾಲರುಗಳಾದ ಡಿ.ಎಸ್.ಹನಗಂಡಿ, ಮಹೇಶ ಕಾರೇಕರ, ಸುನೀಲ ಪಾಟೀಲ, ಸಾವಿತ್ರಿ ಬಿ. ಪಾಟೀಲ, ಜ್ಯೋತ್ಸನಾ ಹನಮಗೊಂಡ, ಕಸ್ತೂರಿ ಎಮ್. ಅರ್ಚನಾ ನಾಂದರೇಕರ ಹಾಗೂ ಬೈರು ಪಾಟೀಲ ಅವರು ಪಾಲ್ಗೊಂಡು ಜಿನೈಕ್ಯ ಸ್ವಾಮಿಜಿಯವರ ಮೂರ್ತಿಗೆ ಮಾಲಾರೆ್ಣ ಮಾಡಿ ಗೌರವ ಸಲ್ಲಿಸಿದರು. ವಿದ್ಯಾಪೀಠದ ಎಲ್ಲ ಶಾಖೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಸ್ವಾಮಿಜೀಯವರ ಭಾವಚಿತ್ರಕ್ಕೆ ಪುಷ್ಪ ಅರ್ಿಸಿ ವಂದಿಸಿದರು. ಕಾರ‌್ಯಕ್ರಮದಲ್ಲಿ ಗೋಮಟೇಶ ವಿದ್ಯಾಪೀಠದ ವಿಶ್ರಾಂತ ಪ್ರಾಂಶುಪಾಲರುಗಳಾದ ವ್ಹಿ. ವ್ಹಿ ಅವರಗೋಳ, ಎಸ್. ಕೆ. ಕಟ್ಟಿ, ಹಾಗೂ ಜಕ್ಕಣ್ಣವರ ಅವರು ಕೂಡ ಉಪಸ್ಥಿತರಿದ್ದದ್ದು ವಿಶೇಷವಾಗಿತ್ತು.