ಮಹಲಿಂಗಪುರ

ಭಾವೈಕ್ಯತೆಯಿಂದ ಬಕ್ರೀದ್ ಹಬ್ಬ ಆಚರಣೆ: ನಾಯ್ಕವಾಡಿ

ಭಾವೈಕ್ಯತೆಯಿಂದ ಬಕ್ರೀದ್ ಹಬ್ಬ ಆಚರಣೆ: ನಾಯ್ಕವಾಡಿ

ಮಹಾಲಿಂಗಪುರ 17: ಪ್ರವಾದಿ ಇಬ್ರಹಿಂ ಅವರ ತ್ಯಾಗ ಬಲಿದಾನಗಳ ನೆನಪಿನಲ್ಲಿ ಹಬ್ಬವೇ ಈದುಲ್ ಅದ್ ಹಾ ಇದನ್ನು ವಿಶ್ವದಾದ್ಯಂತ ಮುಸ್ಲಿಂ ಬಾಂದವರು ಶ್ರದ್ದಾ ಭಕ್ತಿಯಿಂದ ಆಚರಿಸುವ ಬಹು ದೊಡ್ಡ ಹಬ್ಬ ಇದು ಭಾರತದಲ್ಲಿ ಬಕ್ರೀದ್ ಹಬ್ಬವೆಂದೆ ಪ್ರಸಿದ್ದಿ ಪಡೆದಿದೆ ದೇಶದಾದ್ಯಂತ ಮುಸ್ಲಿಮರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮಹಾಲಿಂಗಪುರ ನಗರವು ಭಾವೈಕತೆಗೆ ಹೆಸರಾದ ನಗರ ಇಲ್ಲಿ ಹಿಂದೂ ಮುಸ್ಲಿಂ ಭೇದ ಭಾವವಿಲ್ಲದೆ, ಎಲ್ಲರೂ ಅಣ್ಣ ತಮ್ಮರಂತೆ ಜೀವನ ನಡೆಸುತ್ತಿದ್ದಾರೆ, ಹಬ್ಬವನ್ನು ಭಾವೈಕ್ಯತೆಯಿಂದ ಆಚರಿಸಿ ಅಲಾಹನ ಕೃಪೆಗೆ ಪಾತ್ರರಾಗಿ ಎಂದು ಕಾರಿ ಜುಬೇರ ಇನಾಮಿ ನಾಯ್ಕವಾಡಿ ಹೇಳಿದರು. 

 ಸೋಮವಾರ  ಬೆಳಿಗ್ಗೆ 8 ಗಂಟೆಗೆ ನಗರದ ಕೆಂಗೇರಿಮಡ್ಡಿಯಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿದ ನಗರದ ಎಲ್ಲ ಮುಸ್ಲಿಂ ಬಾಂದವರು ಸ್ಥಳೀಯ ಅಂಜುಮನ್ ಕಮಿಟಿ ಹಾಗೂ ಎಲ್ಲ ಸಮಾಜ ಬಾಂದವರು ಸಾಮೂಹಿಕ ನಮಾಜ್ ಹಾಗೂ ಕುರಾನ್ ಪಠಣ ಮಾಡಿ ಮಾನವ ಕುಲಕ್ಕೆ ಬದುಕಿನಲ್ಲಿ ಸುಖ,ಶಾಂತಿ ನೆಮ್ಮದಿ ನೀಡಲೆಂದು ಅಲ್ಲಾಹನಲ್ಲಿ ಪ್ರಾರ್ಥಿಸಿದರು, ಈದ್ಗಾಹದಲ್ಲಿ ಇಮಾಮರ ಹಿಂದೆ ಸಾಲುಸಾಲಾಗಿ ನಿಂತು " ಅಲ್ಲಾಹು ಅಕ್ಬರ್ " ಅಲ್ಲಾಹು ಅಕ್ಬರ್ " ಎಂದು ಘೋಷಣೆ ಕೂಗುತ್ತಾ ಎಲ್ಲರೂ ತಲೆ ಬಾಗುವ, ದೇವರಿಗೆ ಶರಣು ಹೋಗುವ ಆ ಅಭುತಪೂರ್ವ ದೃಶ್ಯ ರೋಮಾಂಚನಕಾರಿಯಾಗಿಯೂ, ನಯನ ಮನೋಹರವಾಗಿಯೂ ಕಂಡು ಬಂತು ನಮಾಜ್ ನಂತರ ಒಬ್ಬರನೊಬ್ಬರು ಆಲಿಂಗನ ಮಾಡಿಕೊಳ್ಳುವುದು, ಕೈ ಕುಲುಕುವುದು " ಈದ್ ಮುಬಾರಕ್ " ಹೇಳುವುದು ಸಾಮಾನ್ಯವಾಗಿತ್ತು . ಈ ಹಬ್ಬ ಎಲ್ಲರಿಗೂ ಶುಭವನ್ನುಂಟು ಮಾಡಲಿ ಎಂದು ಹರಿಸಿದರು. 

ಭಾವೈಕತೆಗೆ ಸಾಕ್ಷಿ : ಸ್ಥಳೀಯ ರಾಣಿ ಚನ್ನಮ್ಮ ವೃತ್ತದಲ್ಲಿ ಚೆನ್ನಮ್ಮನ ಫೋಟೋಗೆ ಮಾಲಾರೆ​‍್ಣ ಮಾಡಿದರು. ಈ ಸಂಧರ್ಭದಲ್ಲಿ ಹಿಂದೂಗಳು, ಮುಸ್ಲಿಂ ಬಂಧುಗಳಿಗೆ ಸಿಹಿ ಹಂಚಿ ನಾವು ಎಲ್ಲರೂ ಒಂದು ಎಂದು ಸಾರಿ ಹೇಳಿದರು. ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು ಸೋದರತ್ವ ಬೆಳೆಸಿಕೊಳ್ಳುವುದು ದೇವರಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ ಎಂದು ದಾವಲಸಾಬ ನಾಗರ್ಚಿ ಹೇಳಿದರು. 

ಸ್ಥಳೀಯ ಪುರಸಭೆ ಸದಸ್ಯರಾದ ಸಜ್ಜನಸಾಬ ಪೆಂಡಾರಿ, ಅಬ್ದುಲ ಭಾಗವಾನ ಹಿರಿಯರಾದ ಹಾಜಿ ರಾಜೇಸಾಬ್ ಪಕಾಲೀ, ಕಮಲ ತರಕಾರಿ, ಲಿಯಾಕತ ಯಕ್ಸಠ,ಗಣಿ ಖಾಜಿ, ರಾಜೇಸಾಬ ಐನಪುರ, ಸಲೀಮ್ ಕರೋಶಿ, ಮೆಹಬೂಬ ಜೀರಗಾಳ, ಶಮಸುದ್ದಿನ ಅನಸಾರಿ, ದಾವಲಸಾಬ ನಗಾರ್ಚಿ, ಜಮೀರ  ಯಕ್ಸಂಬಿ, ನಬಿ ,ಯಕ್ಸಂಬಿ, ನಜೀರ ಅತ್ತಾರ, ನಜೀರ ಜಾರೆ, ಮಹಿಬುಬ ಜೀರಗಾಳ,ಬಂದು ಪಕಾಲಿ, ಉಸ್ಮಾನ್ ಪೆಂಡಾರಿ, ಶಮಶುದ್ದಿನ ತೇರದಾಳ, ಜಬ್ಬಾರ ಯಕ್ಸಂಬಿ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ