ಚಿನ್ನಾಭರಣ ವ್ಯಾಪಾರಿ ವಾಹನ ತಡೆದು ಪಿಸ್ತೂಲ್ ಹಿಡಿದ ಖದೀಮರು : 4,97 ಕೋಟಿ ದೋಚಿ ಫರಾರಿ

ಚಿನ್ನಾಭರಣ ವ್ಯಾಪಾರಿ ವಾಹನ ತಡೆದು ಪಿಸ್ತೂಲ್ ಹಿಡಿದ ಖದೀಮರು : 4,97 ಕೋಟಿ ದೋಚಿ ಫರಾರಿ

ಬೆಳಗಾವಿ, ಏ, 11 : ಮಹಾರಾಷ್ಟ್ರದ ಚಿನ್ನದ ವ್ಯಾಪಾರಿಯೊಬ್ಬರು ಗುಡ್ಸ್ ವಾಹನವೊಂದರಲ್ಲಿ ಸಾಗಿಸುತ್ತಿದ್ದ 4,97 ಕೋಟಿ ನಗದು ಹಣ ಇದ್ದ ವಾಹನ ತಡೆದು ಪಿಸ್ತೂಲ ಹಾಗೂ ಚಾಕು ತೋರಿಸಿ ದರೋಡೆ ಮಾಡಿ ಫರಾರಿಯಾಗಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮ ಹದ್ದಿಯ ಎಮ್‍ಕೆ ಹುಬ್ಬಳ್ಳಿ ರಸ್ತೆಯಲ್ಲಿ ರವಿವಾರ ತಡರಾತ್ರಿ ನಡೆದಿದಿದೆ.  

     ಮಹಾರಾಷ್ಟ್ರದ ಕೊಲ್ಲಾಪೂರದಲ್ಲಿ ಲಕ್ಷ್ಮೀ ಗೋಲ್ಡ್ ಎಂಬ ಚಿನ್ನಾಭರಣ ಅಂಗಡಿಯಯಲ್ಲಿ ವ್ಯವಹಾರ ಮಾಡಿದ 4 ಕೋಟಿ 97 ಲಕ್ಷ 30 ಸಾವಿರ ರೂಪಾಯಿಗಳಲ್ಲಿ 27,30,000 ರೂಗಳನ್ನು ಒಂದು ಬಾಕ್ಸ ಒಂದಲ್ಲಿ ಹಾಕಿ ಪ್ಯಾಕ ಮಾಡಿ ಉಳಿದ 04,70,000 ರೂ ಹಣವನ್ನು 5 ಗೋನಿ ಚೀಲಗಳಲ್ಲಿ ಹಾಕಿ ಪ್ಯಾಕ ಮಾಡಿದ್ದ ಬಾಕ್ಸ್ ಹಾಗೂ ಗೋನಿ ಚೀಲಗಳನ್ನು ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಚಿನ ಭಾನುದಾಸ ಐಹೊಳೆ ಮತ್ತು ಮಹಾದೇವ ರಾಮಚಂದ್ರ ಬನಸೋಡೆ ಕೂಡಿಕೊಂಡು ಬೊಲೆರೋ ಪಿಕಪ್ ಗೂಡ್ಡ ಗಾಡಿ ನಂ: ಕೆಎ-22 ಡಿ-2333ನಲ್ಲಿ ಹಾಕಿಕೊಂಡು ಆಗಮಿಸುತ್ತಿದ್ದರು. ದಿ. 08ರಂದು ರಾತ್ರಿ ಕೊಲ್ಲಾಪೂರದಿಂದ ಉಡುಪಿಗೆ ಹೋಗುವ ನಿಟ್ಟಿನಲ್ಲಿ ಪೂನಾ ಬೆಂಗಳೂರ ರಸ್ತೆ ಮುಖಾಂತರ ಬೆಳಗಾವಿ ಮಾರ್ಗವಾಗಿ ಹಿರೇಬಾಗೇವಾಡಿ ಹೆದ್ದಾರಿಯಿಂದ ಬೈಲಹೊಂಗಲ ರಸ್ತೆ ಮೂಲಕ ಹೋಗುವಾಗ ಹಿರೇಬಾಗೇವಾಡಿ ಹತ್ತಿರ ಇರ್ಟಿಗಾ ಕಾರ ಗಾಡಿ ನಂಬರ ಕೆಎ-28 ಪಿ-6432ನಲ್ಲಿ ಬಂದ ಖದೀಮರು ಸಚಿನ ಈತನು ಚಲಾಯಿಸುತ್ತಿದ್ದ ಬೊಲೇರೋ ಗಾಡಿಗೆ ಅಡ್ಡಗಟ್ಟಿದ್ದಾರೆ.

     ಸಚಿನ ಈತ ಅವರಿಂದ ತಪ್ಪಿಸಿಕೊಂಡು ಬೈಲಹೊಂಗಲ ರಸ್ತೆ ಹಿಡಿದು ಬಂದು ಗದ್ದಿಕರುವಿನಕೊಪ್ಪ ಎಮ್.ಕೆ.ಹುಬ್ಬಳ್ಳಿ ರಸ್ತೆ ಹಿಡಿದು ಹೋಗುತ್ತಿರುವಾಗ ಎಮ್.ಕೆ.ಹುಬ್ಬಳ್ಳಿ ಸಮೀಪ ಮತ್ತೆ ಇರ್ಟಿಗಾ ಕಾರನಲ್ಲಿದ್ದ ಖದೀಮರು ಹಣ ಇದ್ದ ಬೊಲೋರೋಗೆ ಬೆನ್ನಟ್ಟಿಕೊಂಡು ವಾಹನವನ್ನು ಅಡ್ಡಗಟ್ಟಿ ಕೈಯಲ್ಲಿ ಪಿಸ್ತೂಲ ಮತ್ತು ಚಾಕೂ ಹಿಡಿದು ಸಚಿನ ಮತ್ತು ಮಹಾದೇವ ಇವರನ್ನು ತಾವು ತಂದ ಕಾರನಲ್ಲಿ ಹತ್ತಿಸಿಕೊಂಡು ಮರಳಿ ಎರಡೂ ವಾಹನಗಳನ್ನು ಗದ್ದಿಕರುವಿನಕೊಪ್ಪ ಗ್ರಾಮ ಬಳಿ ಬೊಲೇರೋದಲ್ಲಿದ್ದ 4,97,30,000 ರೂ ಹಣವಿದ್ದ ರಟ್ಟಿನ ಬಾಕ್ಸ ಹಾಗೂ 5 ಗೋನಿ ಚೀಲಗಳನ್ನು ಮತ್ತು ಅವರಿಬ್ಬರ ಪೆÇೀನಗಳನ್ನು ವಾಹನದ ಬೀಗವನ್ನು ಕಿತ್ತುಕೊಂಡು ಹಣವನ್ನು ದೋಚಿಕೊಂಡು ಫರಾರಿಯಾಗಿದ್ದಾರೆ.

      ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟಪಾಟಿಯ ವಿಕಾಸ ವಿಲಾಸ ಕದಂ ಇವರು ಈ ಕುರಿತು ಬೈಲಹೊಂಗಲ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ಖದೀಮರ ಪತ್ತೆಗಾಗಿ ಜಾಲ ಬಿಸಿದ್ದಾರೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಸುದ್ದಿ ಓದಿ