ಮಹಾಲಿಂಗಪುರ ಪಟ್ಟಣದಲ್ಲಿ 03ರಂದು ತೆರೆಬಂಡಿ ಸ್ಪರ್ಧೆ.
ಮಹಾಲಿಂಗಪುರ 03: ಪಟ್ಟಣದ ಬುದ್ಧಿ ಬಡಾವಣೆಯ ಜೀರಗಾಳ ಅವರ ಜಮೀನಿನಲ್ಲಿ ಶ್ರೀ ಬಸವೇಶ್ವರ ಜಾತ್ರಾ ಕಮಿಟಿ ಹಾಗೂ ಪುರಸಭೆಯ ಸಹಯೋಗದಲ್ಲಿ ಅ.03ರಂದು ತೆರೆಬಂಡಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಶ್ರೀಮನ್ ಮನ್ಮಮಹಾರಾಜ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು ಮಹಾಲಿಂಗಪುರದ ಹಿರಿಯರೂ ಯಾತ್ರಾ ಕಮಿಟಿಯ ಅಧ್ಯಕ್ಷರಾದ ಯಲ್ಲನಗೌಡ ಪಾಟೀಲ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕೆಪಿಸಿಸಿ ಕಾಂಗ್ರೆಸ್ ಕಿಸಾನ್ ತೇರದಾಳ ಮತಕ್ಷೇತ್ರದ ಸಂಚಾಲಕರಾದ ಡಾ.ಪದ್ಮಜೀತ ನಾಡಗೌಡ ಪಾಟೀಲ, ಭಾರತೀಯ ಸೇನೆಯ ಮಾಜಿ ಯೋಧ ಶ್ರೀಶೈಲ ಭಜಂತ್ರಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಹುಮಾನಗಳನ್ನು ಕೊಡಮಾಡಿದ ಕಾಂಗ್ರೆಸ್ ನಾಯಕರಾದ ಡಾ.ಎ.ಆರ್.ಬೆಳಗಲಿ, ಸಿದ್ದು ಕೊಣ್ಣೂರ, ಪ್ರಭಾವತಿ ಚಾವಡಿ, ಸುರೇಶ ಹೊಸೂರ, ಅಜಯ ನುಚ್ಚಿ ಆಗಮಿಸಲಿದ್ದಾರೆಂದು ವ್ಯವಸ್ಥಾಪಕರಾದ ಕೃಷ್ಣ ಗೌಡ ಪಾಟೀಲ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಈ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ 1ಲಕ್ಷ ರೂಗಳು, ದ್ವಿತೀಯ ಬಹುಮಾನ 75ಸಾವಿರ, ತೃತೀಯ ಬಹುಮಾನ 50ಸಾವಿರ ಹಾಗೂ ಚತುರ್ಥ ಬಹುಮಾನ 25ಸಾವಿರ ಅಲ್ಲದೆ ಒಟ್ಟು 13 ನಗದು ಬಹುಮಾನಗಳ ಜೊತೆಯಲ್ಲಿ ಪಾರಿತೋಷಕಗಳು ಮತ್ತು ಆಕರ್ಷಕ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು.
ಈ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಪ್ರವೇಶ ಫೀ 2500/- ರೂಗಳನ್ನು ನಿಗದಿಗೊಳಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವರು 9901343522, 9731097077 ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ.