ವೃತ್ತಿ ಮಾರ್ಗದರ್ಶನವೇ ಜೀವನದ ಯಶಸ್ಸು ಜಿಲ್ಲಾಧಿಕಾರಿ ಎಮ್.ಜಿ.ಹಿರೇಮಠ ಹೇಳಿಕೆ: ವೃತ್ತಿ ಆಯ್ಕೆಗಳನ್ನು ಗುರುತಿಸುವ ವಿಶೇಷ ಶೈಕ್ಷಣಿಕ ಕಾರ್ಯಕ್ರಮ
ಲೋಕದರ್ಶನ ವರದಿ
ಬೆಳಗಾವಿ 21: ವಿದ್ಯಾರ್ಥಿಗಳಿಗೆ ಸೂಕ್ತ ವೃತ್ತಿ ಮಾರ್ಗದರ್ಶನ ಸಿಕ್ಕರೆ ಇಡೀ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಎಮ್.ಜಿ.ಹಿರೇಮಠ ಬೆಳಗಾವಿ ತಿಳಿಸಿದರು.
ನಗರದ ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಟ್ಯಾಗೋರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ದಿ. 21ರಂದು ಹಮ್ಮಿಕೊಳ್ಳಲಾಗಿದ್ದ ವೃತ್ತಿ ಆಯ್ಕೆಗಳನ್ನು ಗುರುತಿಸುವುದು ಎಂಬ ವಿಶೇಷ ಶೈಕ್ಷಣಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಅಭಿಲಾಷೆಗೆ ತಕ್ಕಂತೆ ಕೋರ್ಸಗಳನ್ನು ಆಯ್ಕೆ ಮಾಡಿಕೊಂಡು ವೃತ್ತಿ ಮಾರ್ಗದರ್ಶನ ಪಡೆದುಕೊಂಡು ತಮ್ಮ ಜೀವನದ ಯಶಸ್ಸನ್ನು ಪಡೆದುಕೊಳ್ಳಬೇಕು. ವೃತ್ತಿಯಲ್ಲಿ ಆಳವಾದ ಪರಿಣಿತಿಯನ್ನು ಪಡೆದು ಸಮಾಜಕ್ಕೆ ಉಪಕಾರಿಗಳಾಗಿ ವೃತ್ತಿಯನ್ನು ನಡೆಸಿ ಸಮಾಜದಲ್ಲಿ ತಮ್ಮ ಹೆಸರು ಅಜರಾಮರ ವಾಗುವಂತೆ ರಕ್ಷಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇಂದಿನ ವಿದ್ಯಾರ್ಥಿಗಳು ಪಾಲಕರಿಗೆ, ಸಮಾಜಕ್ಕೆ ಒಳ್ಳೆಯವರಾಗಿ, ಗುರುಗಳಿಗೆ ವೀಧೆಯಕರಾಗಿ ರೂಪುಗೊಳ್ಳುವಲ್ಲಿ ಇಂತಹ ಕಾರ್ಯಕ್ರಮಗಳು ಅತಿಉಪಯುಕ್ತ ಎಂದು ನುಡಿದರು.
ಖ್ಯಾತ ವೃತ್ತಿ ಆಯ್ಕೆ ತಜ್ಞರಾದ ಅಮೇರಿಕದ ರೆಗುಲೇಟರಿ ಅಪೆಕ್ಸ ಸಂಸ್ಥೆಯ ನಿಧಿ ಗಣಿ ಮಾತನಾಡುತ್ತಾ, ಇಂದಿನ ಬದಲಾಗುತ್ತಿರುವ ದಿನಮಾನಗಳಲ್ಲಿ ಎಲ್ಲರಿಗೂ ಸಮಾನವಾದ ಅವಕಾಶಗಳಿವೆ, ಎಲ್ಲರಿಗೂ ಸ್ವಂತ ಆಸಕ್ತಿ ಇರಬೇಕು. ಕಂಪ್ಯೂಟರ ವಿಷಯವು ನಾಲ್ಕನೇಯ ಆಯಾಮವಾಗಿ ಹೊರಹೊಮ್ಮಿದೆ, ಎಲ್ಲಾ ತಂತ್ರಜ್ಞಾನಗಳು ಒಟ್ಟುಗೂಡಿವೆ. ವಿಜ್ಞಾನ, ಕಲಾ, ವಾಣಿಜ್ಯಶಾಸ್ರ್ತ, ತಂತ್ರಜ್ಞಾನ ಮತ್ತು ಕಾನೂನು ವಿಷಯಗಳನ್ನು ಆಯ್ಕೆಮಾಡಿಕೋಳ್ಳಬಹುದು ಎಂದು ತಿಳಿಸಿದರು.ಇಂದು ವಿಶ್ವದಲ್ಲಿ ಬಹುಮುಖ ವೃತ್ತಿ ಆಯ್ಕೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಅತ್ಯಂತ ಮಹತ್ವ ನೀಡಲಾಗುತ್ತಿದೆ ಮತ್ತು ಭವಿಷ್ಯದಲ್ಲಿ ಬಹುಮುಖ ಆಯ್ಕೆಗೆ ವಿಶೇಷ ಮಹತ್ವ ನೀಡಲಾಗುವುದು ಎಂದು ತೀಳಿಸುತ್ತಾ ವಿವಿಧ ಬಹುಮುಖ ವ್ಯಕ್ತಿತ್ವದ ಆಯ್ಕೆಗಳನ್ನು ವಿವರಿಸಿದರು.
ಅದ್ಯಕ್ಷತೆ ವಹಿಸಿ ಮಾತನಾಡಿದ ರವೀಂದ್ರನಾಥ ಟ್ಯಾಗೋರ ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಸಿ.ಎನ್. ನಾಯ್ಕರ ಕಠಿಣ ಪರಿಶ್ರಮ, ಯೋಜನಾಬದ್ಧ ಅಧ್ಯಯನ, ನಿರ್ದಿಷ್ಟ ಗುರಿ ಇವುಗಳು ಕಾರ್ಯಯೋಜನೆಯಲ್ಲಿ ಅಳವಡಿಸಿಕೊಂಡರೆ ಬದುಕಿನಲ್ಲಿ ಯಶಸ್ಸು ಕಾಣಲು ಸಾದ್ಯವಿದೆ. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶದಲ್ಲಿ ನಡೆದರೆ ಉಜ್ವಲ ಭವಿಷ್ಯವನ್ನು ಕಾಣಬಹುದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವೇದಿಕೆಯ ಮೇಲೆ ನಾಯ್ಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶ್ವೇತಾ ಸಿ. ನಾಯ್ಕರ ಉಪಸ್ಥಿತರಿದ್ದರು.
ದೀಪಾ ಸ್ವಾಗತಿಸಿದರು, ಪ್ರಣಾಲಿ ಸಾಂಬ್ರೇಕರ ಅತಿಥಿಗಳನ್ನು ಪರಿಚಯಿಸಿದರು, ಆರತಿ ಶಿವ ವಂದಿಸಿದರು. ಕೀರ್ತಿ ಕಾರ್ಯಕ್ರಮ ನಿರೂಪಿಸಿದರು.