ಕಾರು ಲಾರಿ ನಡುವೆ ಅಪಘಾತ : ಪತಿ, ಪತ್ನಿ ಸಾವು : ಅನಾತವಾಗಿ ಬದುಕುಳಿದ 1 ವರ್ಷದ ಮಗು

ಕಾರು ಲಾರಿ ನಡುವೆ ಅಪಘಾತ : ಪತಿ, ಪತ್ನಿ ಸಾವು : ಅನಾತವಾಗಿ ಬದುಕುಳಿದ 1 ವರ್ಷದ ಮಗು

ಬೆಳಗಾವಿ : ರಸ್ತೆಯಲ್ಲಿ ನಿಂತಿದ್ದ ಕಂಟೇನರ್ ಲಾರಿಗೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪತಿ ಹಾಗೂ ಪತ್ನಿ ಇಬ್ಬರು ಸಾವೊನ್ನೊಪ್ಪಿದ್ದು, ಅವರ ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಕೊಗನೋಳಿ ಬಳಿ ಜರುಗಿದೆ.  

   ಈ ಅಪಘಾತದಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ಸಂಭಾಜಿ ನಗರದ ಜಿಗರ ಕಿಶೋರ ನಾಕ್ರಾನಿ ಹಾಗೂ ಆತನ ಹೆಂಡತಿ ಹೇತಿಕಾ (24) ಇವರಿಬ್ಬರು ಮೃತಪಟ್ಟ ದುರ್ಧೈವಿಗಳಾಗಿದ್ದಾರೆ. ಈ ದಂಪತಿಗಳ ಜೊತೆ ಇದ್ದ ಮಗಳಾದ ಒಂದು ವರ್ಷದ ವೃಷ್ಟಿ (1) ಬದುಕುಳಿದಿದ್ದಾಳೆ. 

     ದಿ: 23 ರಂದು ಸಂಜೆ ಟಾಟಾ ಕಂಪನಿಯ ನೆಕ್ಲೋನ ಕಾರ ನಂ. ಎಂ ಎಚ್ -09 ಎಪ್ ವಿ-3877 ಇದರಲ್ಲಿ ಹುಬ್ಬಳ್ಳಿಯಿಂದ ಕೊಲ್ಲಪೂರಕ್ಕೆಹೋಗುತ್ತಿದ್ದಾಗ ನಿಪ್ಪಾನಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕೂಗನೋಳ್ಳಿ ಗ್ರಾಮ ಹದ್ದಿಯ ಚೆಕಪೋಷ್ಟ ಸಮೀಪದಲ್ಲಿ ರಸ್ತೆಯ ಮೇಲೆ ನಿಲ್ಲಿಸಿದ್ದ ಟಾಟಾ ಕಂಟೇನರ ಲಾರಿ ನಂ ಆರ್‌ಜೆ-14 ಜಿಜಿ-9017 ನೇದ್ದಕ್ಕೆ ಹಿಂಬಂದಿನಿಂದ ಹಾಯಿಸಿ ಅಪಘಾತಪಡಿಸಿದ್ದರು. ಇವರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. 

   ಸದರಿ ಗಾಯಾಳುಗಳನ್ನು ಕೊಲ್ಲಾಪೂರದ ಅಷ್ಟೇರಾ ಆಧಾರ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ದಾಖಲಿಸಲಾಗಿತ್ತು. ಆದರೆ ದಿ. 24 ರ ಬೆಳಗಿನ ಜಾವ ಉಪಚಾರ ಫಲಿಸದೇ ಮೃತಪಟ್ಟರು. ಈ ಬಗ್ಗೆ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 10/2026 ಕಲಂ, 281, 285, 125(ಬಿ) ಬಿಎನ್‌ಎಸ್ -2023 ನೇದ್ದಕ್ಕೆ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದು ಇದೆ.


ಸುದ್ದಿ ಓದಿ