ಇಂಡಿ

ಗುರು ಗುಡ್ಡದ ಬಸವರಾಜೇಂದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವ ರದ್ದು

ಗುರು ಗುಡ್ಡದ ಬಸವರಾಜೇಂದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವ ರದ್ದು

ಇಂಡಿ 21: ಏ. 24 ಮತ್ತು 25ರಂದು ನಡೆಯಬೇಕಿದ್ದ ಇಂಡಿ ತಾಲೂಕಿನ ಖೇಡಗಿ ಗ್ರಾಮದ  ಗುರು ಗುಡ್ಡದ ಬಸವರಾಜೇಂದ್ರ ಶಿವಯೋಗಿಗಳ 56 ನೇ ಜಾತ್ರಾ ಮಹೋತ್ಸವವನ್ನು ಕೋವಿಡ್-19 ಕಾರಣದಿಂದ ರದ್ದುಪಡಿಸಲಾಗಿದೆ ಎಂದು ಖೇಡಗಿ ವಿರಕ್ತ ಮಠದ ಶಿವಬಸವರಾಜೇಂದ್ರ ಶಿವಾಚಾರ್ಯರು ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಕ್ತರ ಹಿತದೃಷ್ಠಿಯಿಂದ ಜಾತ್ರಾ ಮಹೋತ್ಸವವನ್ನು ರದ್ದುಪಡಿಸಲಾಗಿದೆ. ಭಕ್ತರ ಆರೋಗ್ಯವೇ ಶ್ರೀಮಠದ ಸಂಪತ್ತು ಎಂದು ಭಾವಿಸಿದ್ದೇವೆ. ಕೊರೋನಾ ಎರಡನೇ ಅಲೆ ಅತೀ ವೇಗವಾಗಿ ಹರಡುತ್ತಿದ್ದು ಸಾಕಷ್ಟು ಸಾವು, ನೋವು ಸಂಭವಿಸುತ್ತಿವೆ. ಭಕ್ತರು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಹಾಕಿಕೊಂಡು ಕೊರೋನಾದಿಂದ ರಕ್ಷಿಸಿಕೊಳ್ಳಬೇಕು ಎಂದರು.

ಸುದ್ದಿ ಓದಿ