ದೇಶದ ಸಮಗ್ರ ಅಭಿವೃದ್ಧಿಗೆ ಸರಕಾರಗಳು ಶ್ರಮಿಸುತ್ತಿವೆ: ಯಡಿಯೂರಪ್ಪ
ರಾಮದುರ್ಗ 07: ಯಾವುದೇ ಜಾತಿ ಬೇಧ ಮಾಡದೇ ದೇಶದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶ್ರಮಿಸುತ್ತಿವೆ. ತಾಲೂಕಿನ ಕಿತ್ತೂರ ಏತ ನೀರಾವರಿ ಅಭಿವೃದ್ಧಿಗೆ ಬೇಕಾದ ಅನುದಾನ ನೀಡಿ ಜಮೀನುಗಳಿಗೆ ನೀರಾವರಿ ಸೌಲಭ್ಯ ವದಗಿಸಲು ಪ್ರಾಮಾಣಿಕವಾಗಿ ಕಾರ್ಯಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಏರ್ಪಸಿದ ಬಿಜಿಪಿ ಪಕ್ಷದ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಪಕ್ಷದ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿಯವರಿಗೆ ಮತ ನೀಡುವದರೊಂದಿಗೆ ದಿ. ಸುರೇಶ ಅಂಗಡಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕೆಂದು ಮನವಿ ಮಾಡಿದರು.
ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಮಾತನಾಡಿ ರಾಜ್ಯದಿಂದಾ ಹಲವಾರು ಜನ ರೆಲ್ವೆ ಮಂತ್ರಿಯಾಗಿ ಕೆಲಸ ಮಾಡಿದರೂ ದಿ. ಸುರೇಶ ಅಂಗಡಿ ಹಾಗೆ ರಾಜ್ಯದ ಅಭಿವೃದ್ಧಿಗೆ ನೀಡಿದ ಮಹತ್ವ ಯಾರೂ ಮಾಡಿಲ್ಲಾ. ಕೇವಲ ಒಂದು ವರೆ ವರ್ಷದಲ್ಲಿ ರೂ. 57 ಸಾವಿರ ಕೋಟಿ ಅನುದಾನ ತಂದು ರಾಜ್ಯದಲ್ಲಿ ರೈಲ್ವೆಯ ಸಂಚಾರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ನುಡಿದರು. ಹಲವಾರು ವರ್ಷಗಳಿಂದಾ ನೆನೆಗುದಿಗೆ ಬಿದ್ದ ಧಾರವಾಡ ಕಿತ್ತೂರ ಬೆಳಗಾವಿ ರೆಲ್ವೆ ಸಂಚಾರದ ಕಾಮಗಾರಿಯನ್ನು ಕೈಗೆತ್ತಿಕೊಂಡು ರೂ. 900 ಕೋಟಿ ಹಣ ಮಂಜೂರ ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ ಎಂದು ಹೇಳಿದರು. ಪಕ್ಷದ ಅಭ್ಯರ್ಥಿಗೆ ಮತ ನೀಡಿ ಉಭಯ ಸರಕಾರಗಳನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಪಕ್ಷ ಇನ್ನು 20 ವರ್ಷಗಳ ವರೆಗೆ ಅಧಿಕಾರ ನಡೆಸಲಿದೆ ಎಂದು ಭವಿಷ್ಯ ನುಡಿದ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ವಿಶ್ವದಲ್ಲಿಯೇ ಉತ್ತಮ ನಾಯಕ ಎನ್ನುವ ಹೆಗ್ಗಳಿಕೆಗೆ ಪ್ರಧಾನ ಮಂತ್ರಿ ನರೆಂದ್ರ ಮೋದಿ ಪಾತ್ರರಾಗಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಜಮ್ಮ ಮತ್ತು ಕಾಶ್ಮೀರದಲ್ಲಿ 370 ಆರ್ಟಿಕಲ್ ರದ್ದುಗೊಳಿಸಿ ಒಂದೇ ದೇಶ ಒಂದೇ ಕಾನೂನು ಜಾರಿಗೆ ಮಾಡಿದ ಕಿರ್ತಿ ಮೋದಿಯವರಿಗೆ ಸಲ್ಲುತ್ತದೆ ಎಂದು ನುಡಿದರು. ಹಲವು ದಶಕಗಳಿಂದಾ ರಾಮ ಮಂದಿರ ನಿರ್ಮಾಣವನ್ನು ವಿವಾದ ಗೊಳಿಸಿದ ಕಾಂಗ್ರೆಸ್ ಪಕ್ಷ ಮುಂದೆ ಹಾಕುತ್ತಾ ರಾಜಕೀಯ ಮಾಡುತ್ತಲೆ ಇತು. ಮೋದಿಜಿಯವರ ದೂರದೃಷ್ಟಿಯಿಂದಾ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಅಯೋದ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಣ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ನುಡಿದು. ದೇಶ ಭಕ್ತರ ಪಕ್ಷವಾದ ಬಿಜಿಪಿಗೆ ಮತ ನೀಡಿ ಮೋದಿಯವರ ಕೈಬಲಪಡಿಸುವಂತೆ ಮತಯಾಚನೆ ಮಾಡಿದರು.
ಶಾಸಕ ಮಹಾದೇವಪ್ಪ ಯಾದವಾಡ ಕಳೆದ ಎಲ್ಲ ಚುನವಾಣೆಯಲ್ಲಿಯೂ ದಿ. ಸುರೇಸ ಅಂಗಡಿಯವರಿಗೆ ಹೆಚ್ಚಿನ ಬಹು ಮತ ನೀಡುತ್ತಲೆ ಬಂದಿದ್ದೆವೆ ಈಗಲೂ ತಾಲೂಕಿನಿಂದಾ ಹೆಚ್ಚಿನ ಮತ ನೀಡಿ ಪ್ರಚಂಡ ಬಹುಮತದಿಂದಾ ಮಂಗಲಾ ಅಂಗಡಿಯವರು ಗಲ್ಲಲ್ಲು ಕಾರಣರಾಗುತ್ತೆವೆ ಎಂದು ನುಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ ಕತ್ತಿ, ಸಣ್ಣ ಕೈಗಾರಿಕೆ ಮತ್ತು ವಾರ್ತಾ ಪ್ರಸಾರ ಇಲಾಖೆ ಸಚಿವ ಸಿ ಸಿ ಪಾಟೀಲ, ಶಾಸಕ ಪಿ ರಾಜೀವ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾತನಾಡಿದರು. ಸಚಿವ ಶ್ರೀಮಂತ ಪಾಟೀಲ ವಿಧಾನ ಪರಿಷತ ಸದಸ್ಯ ಹಣಮಂತ ನಿರಾಣಿ, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರ ಪಠಾಣ ಹಾಗೂ ಇತರರು ಇದ್ದರು.