ಸರ್ಕಾರಿ ನೌಕರಿ ಬಯಸದೇ ಸ್ವ ಉದ್ಯೋಗಿಗಳಾಗಲು ಕರೆ

ಸರ್ಕಾರಿ  ನೌಕರಿ ಬಯಸದೇ ಸ್ವ ಉದ್ಯೋಗಿಗಳಾಗಲು ಕರೆ

ಲೋಕದರ್ಶನ ವರದಿ

ವಿಜಯಪುರ 26: ಪ್ರತಿಯೊಬ್ಬರು ಸಕರ್ಾರಿ ನೌಕರಿ ಬಯಸದೇ ಸ್ವಯಂ ಉದ್ಯೋಗಿಗಳಾಗಿ ಆಥರ್ಿಕವಾಗಿ ಸದೃಢರಾಗಬೇಕು ಎಂದು ವಿವಿ ಸಂಘದ ಆಡಳಿತ ಮಂಡಳಿ ಸದಸ್ಯ ವಿಕಾಸ ದರಬಾರ ಹೇಳಿದರು. 

ಇತ್ತೀಚೆಗೆ ಭಾರತದ ಸಕರ್ಾರದ ಕ್ಷೇತ್ರ ಜನಸಂಪರ್ಕ ಇಲಾಖೆ,  ದರಬಾರ ಮಹಾವಿದ್ಯಾಲಯ, ಪ್ರಧಾನಮಂತ್ರಿ ಕೌಶಲ್ಯಾಭಿವೃದ್ದಿ ಕೇಂದ್ರ ಹಾಗೂ ಗ್ರಾಮಾಭಿವೃದ್ದಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರ ರುಡ್ಸೆಟ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ದರಬಾರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕೌಶಲ್ಯಾಭಿವೃದ್ದಿ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದರು. 

ಇಂದಿನ ಯುವ ಜನಾಂಗ ಮನೆಯವರಿಗೆ ಅವಲಂಬಿತರಾಗದೇ ಕೌಶಲ್ಯಾಭಿವೃದ್ದಿ ಕೇಂದ್ರದಿಂದ ದೊರಕುವ ವಿವಿಧ ಕೌಶಲ್ಯ ತರಬೇತಿಗಳನ್ನು ಪಡೆದು, ಸ್ವ ಉದ್ಯೋಗಿಗಳಾಗುವ ಜೊತೆಗೆ ಇತರರಿಗೂ ಉದ್ಯೋಗ ದೊರಕಿಸಬೇಕು ಎಂದು ಹೇಳಿದರು. 

ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದ ಅಧಿಕಾರಿ ಸಂಜೀವ ಕುಲಕಣರ್ಿ ಮಾತನಾಡಿ, ಕೇವಲ ಪದವಿ ಪಡೆದರೆ ಸಾಕಾಗುವುದಿಲ್ಲ. ಜೊತೆಗೆ ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಹಲವಾರು ಕೌಶಲ್ಯಗಳನ್ನು ಪಡೆಯಲೇಬೇಕು, ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದಿಂದ ಸಿಗುವ ಉಚಿತ ತರಬೇತಿಗಳನ್ನು ಪಡೆದು ಸ್ವ ಉದ್ಯೋಗಿಗಳಾಗಬೇಕು ಎಂದು ಹೇಳಿ, ವ್ಯಕ್ತಿತ್ವ ನಿಮರ್ಾಣ ಮತ್ತು ಸ್ಕಿಲ್ ಇಂಡಿಯಾದ ಕುರಿತು ವಿಡಿಯೋಗಳನ್ನು ಪ್ರದಶರ್ಿಸಿದರು. ರುಡಸೆಟ್ ಸಂಸ್ಥೆಯ ಅಧಿಕಾರಿ ಮಲ್ಲಿಕಾಜರ್ುನ ಹತ್ತಿ ಮಾತನಾಡಿದರು. ಪ್ರಾಚಾರ್ಯ ಗಿರಿಶ ಮಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಅಶ್ವಿನಿ ಪವಾರ ಪ್ರಾಥರ್ಿಸಿದಳು. ಉಪನ್ಯಾಸಕ ಸುನೀಲಕುಮಾರ ಯಾದವ ಸ್ವಾಗತಿಸಿದರು. ಮಂಜುನಾಥ ಜುನಗೋಡ ನಿರೂಪಿಸಿದರು. ಮನೋಹರ ದೊಡಮನಿ ವಂದಿಸಿದರು. 

ಕಾರ್ಯಕ್ರಮದಲ್ಲಿ ಆಯ್.ಬಿ.ಜಾಬಾ, ಚೈತನ್ಯ ಮುತ್ತಗಿಕರ, ಶಕೀಲ ಮುಲ್ಲಾ, ಮಂಜುನಾಥ ಸಜ್ಜನ, ಜಗದೀಶ ಸಾತಿಹಾಳ, ಭಾಸ್ಕರ್ ಎಂ., ರಾಜು ಕಪಾಲಿ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ