ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿ CSKಯ ಡೆವೊನ್ ಕಾನ್ವೇ ಪ್ರೀ ವೆಡ್ಡಿಂಗ್ ಪಾರ್ಟಿ
ಮುಂಬೈ: ಏಪ್ರಿಲ್ 20 : ನ್ಯೂಜಿಲೆಂಡ್ ಆಟಗಾರ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನ ಸದಸ್ಯ ಡೆವೊನ್ ಕಾನ್ವೇ ಶೀಘ್ರದಲ್ಲೇ ವಿವಾಹ ಬಂಧನದಲ್ಲಿ ಸಿಲುಕಿಕೊಳ್ಳಲಿದ್ದಾರೆ. ಹೀಗಾಗಿ ಇತ್ತೀಚಿಗೆ ಅವರು ಪ್ರೀ ವೆಡ್ಡಿಂಗ್ ಪಾರ್ಟಿ ಆಯೋಜಿಸಿದ್ದರು. ಅದು ತುಂಬಾ ವಿಶೇಷ ಸಮಾರಂಭ. ಹೇಗೆಂದರೆ ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿ ಅವರು ಕಾಣಿಸಿಕೊಂಡು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರಿಗೆ ಪ್ರೀ ವೆಡ್ಡಿಂಗ್ ಪಾರ್ಟಿ ನೀಡಿದರು.
ಪಾರ್ಟಿಯಲ್ಲಿ ಭಾರತೀಯ ಕ್ರಿಕೆಟಿಗರು ಮತ್ತು ಸಾಗರೋತ್ತರ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳು ಸಾಂಪ್ರದಾಯಿಕ ಭಾರತೀಯ ಉಡುಗೆಯಲ್ಲಿ ಮಿಂಚಿದ್ರು.
ಕಿಮ್ ವ್ಯಾಟ್ಸನ್ ಅವರು ಡೆವೊನ್ ಕಾನ್ವೇ ಅವರನ್ನು ವಿವಾಹವಾಗುತ್ತಿದ್ದು ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿದ್ದವರೆಲ್ಲಾ ಈ ಜೋಡಿಯನ್ನ ಅಭಿನಂದಿಸಿದರು.
ಪಾರ್ಟಿಯಲ್ಲಿ ಎಂಎಸ್ ಧೋನಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಿವಂ ದುಬೆ, ಮೊಯಿನ್ ಅಲಿ, ಕೋಚ್ ಸ್ಟೀಫನ್ ಫ್ಲೆಮಿಂಗ್ ಸೇರಿದಂತೆ ಹಲವರು ಭಾಗವಹಿಸಿದ್ದರು.