ಬೆಳಗಾವಿ ಸಿಸಿಬಿ ಪೊಲೀಸರ ಕಾರ್ಯಾಚರಣೆ ; ಇಬ್ಬರು ಅಕ್ರಮ ಗಾಂಜಾ ಸಾಗಾಟಗಾರರ ಬಂಧನ ; ಲಕ್ಷಾಂತರ ಗಾಂಜಾ ವಶ

ಬೆಳಗಾವಿ ಸಿಸಿಬಿ ಪೊಲೀಸರ ಕಾರ್ಯಾಚರಣೆ ; ಇಬ್ಬರು ಅಕ್ರಮ ಗಾಂಜಾ ಸಾಗಾಟಗಾರರ ಬಂಧನ ; ಲಕ್ಷಾಂತರ ಗಾಂಜಾ ವಶ

ಬೆಳಗಾವಿ, ಏ, 10 : ಅಕ್ರಮವಾಗಿ ಮಹಾರಾಷ್ಟ್ರ ರಾಜ್ಯದ ಮೀರಜಿ ನಗರನಿಂದ ಬೆಳಗಾವಿಗೆ ಸರಬರಾಜು ಮಾಡಲು ಯತ್ನಿಸುತ್ತಿದ್ದ ಲಕ್ಷಾಂತರ ಮೌಲ್ಯದ ಗಾಂಜಾ ಸಮೇತವಾಗಿ ಇಬ್ಬರು ಆರೋಪಿತರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಈ ಅಕ್ರಮ ಗಾಂಜಾ ಸಾಗಾಟ ಪ್ರಕರಣದಲ್ಲಿ ಅಮನ್ ಅಕ್ರಮ ಜಮಾದಾರ(20) (ಸಾ : ಕ್ವಾಜಾ ಬಸ್ತಿ, ಮೀರ, ಜಿ: ಸಾಂಗಲಿ) ಮತ್ತು ಫಾರೂಖ ಆಲಮನವಾಜ್ ಖಾನ್(37) (ಸಾ: ಕ್ವಾಜಾ ಬಸ್ತಿ, ಮೀರಜ, ಜಿ: ಸಾಂಗಲಿ) ಈ ಇಬ್ಬರು ಬಂಧಿತರಾಗಿದ್ದಾರೆ.

     ದಿ. 10 ರಂದು ಖಚಿತ ಮಾಹಿತಿ ಆಧರಿಸಿ ಆಯುಕ್ತ ಡಾ. ಬೋರಲಿಂಗಯ್ಯಾ ಹಾಗೂ ಡಿಸಿಪಿಗಳಾದ ರವೀಂದ್ರ ಗಡಾದಿ ಮತ್ತು ಸ್ನೇಹಾ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಪೆÇಲೀಸ್ ಇನ್ಸ್ಪೆಕ್ಟರ್ ನಿಂಗನಗೌಡ ಪಾಟೀಲ ನೇತೃತ್ವದ ತಂಡವು ಮಹಾರಾಷ್ಟ್ರ ಸಧ್ಯ ಜುನೇದಿ ನಗರ, ಕುಡಚಿ, ತಾ: ರಾಯಬಾಗ ಇವರಿಂದ 1 08 ಕೆಜಿ 300 ಗ್ರಾಂ ತೂಕದ ಗಾಂಜಾದ ಪೆÇಟ್ಟಣಗಳು, ಅಂದಾಜು ಬೆಲೆ ರೂ. 2,49,000 ಹಾಗೂ ಗಾಂಜಾ ಸರಬರಾಜು ಮಾಡಲು ಬಳಸುತ್ತಿದ್ದ ಹೊಂಡಾ ಕಂಪನಿಯ ನವಿ ಮೋಟಾರ್ ಸೈಕಲ್ ನಂ- ಎಮ್ಹೆಚ್-10/ಡಿಸಿ-0426, ಅಂದಾಜು ಬೆಲೆ ರೂ. 15,000 ಮತ್ತು ಮೊಬೈಲ್ ಫೆÇೀನ್ ಇವುಗಳನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ಪ್ರಕರಣ ಹೊರಬಂದಿದೆ.

    ಮಹಾರಾಷ್ಟ್ರ ರಾಜ್ಯದ ಪಂಡರಪುರ ಹಾಗೂ ಬೇರೆ ಬೇರೆ ಭಾಗಗಳಿಂದ ಗಾಂಜಾ ತಂದು ಅಕ್ರಮವಾಗಿ ಮಾರಾಟ ಮಾಡುತ್ತಿದ ಬಗ್ಗೆ ತನಿಖೆಯಿಂದ ತಿಳಿದು ಬಂದಿದ್ದು, ಈ ಸಂಬಂಧವಾಗಿ ಪಿಐ, ಸಿಸಿಬಿ ಅವರು ನೀಡಿದ ದೂರಿನ ಮೇರೆಗೆ ಸಿಇಎನ್ ಪೆÇಲೀಸ್ ಠಾಣೆ ಅಪರಾಧ ಸಂಖ್ಯೆ: 38/2022 ಕಲಂ 20(b) (i) (ಃ) ಎನ್‍ಡಿಪಿಎಸ್ ಕಾಯ್ದೆ-1985 ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿರುತ್ತದೆ.

    ಈ ವಿಶೇಷ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೆÇಲೀಸ್ ಇನ್ಸ್ಪೆಕ್ಟರ್ ನಿಂಗನಗೌಡ ಪಾಟೀಲ ಹಾಗೂ ಸಿಬ್ಬಂದಿಗಳಾದ ಹೆಚ್.ಎಸ್.ನಿಸುನ್ನವರ, ಬಿ.ಎನ್.ಬಳಗನ್ನವರ, ಎಸ್.ಎಸ್.ಪಾಟೀಲ, ಎಮ್.ಎಮ್.ವಡೆಯರ್, ಎಸ್.ಎಮ್.ಭಜಂತ್ರಿ, ವಾಯ್.ಡಿ ನದಾಫ್, ಎಸ್.ಬಿ ಪಾಟೀಲ ಇವರುಗಳ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ.

ಸುದ್ದಿ ಓದಿ