ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ಶೇ. 99.37ರಷ್ಟು ತೇರ್ಗಡೆ

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ಶೇ. 99.37ರಷ್ಟು ತೇರ್ಗಡೆ

ನವದೆಹಲಿ, ಜು  30   ಕೇಂದ್ರ ಪ್ರೌಡಶಿಕ್ಷಣ ಮಂಡಳಿ (ಸಿಬಿಎಸ್‌ಇ) ಶುಕ್ರವಾರ ಹನ್ನೆರಡನೇ ತರಗತಿ ಫಲಿತಾಂಶವನ್ನು ಘೋಷಿಸಿದ್ದು, ಇದರಲ್ಲಿ ಶೇ 99.37 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ಪೈಕಿ ಬಾಲಕಿಯರು ಶೇ. 99.67 ಹಾಗೂ ಶೇ. 99.67ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ.
ಕೇಂದ್ರ ವಿದ್ಯಾಲಯ ಮತ್ತು ಸೆಂಟ್ರಲ್ ಟಿಬೆಟಿಯನ್ ಸ್ಕೂಲ್ ಅಡ್ಮಿನಿಸ್ಟ್ರೇಷನ್ (ಸಿಟಿಎಸ್ಎ)ಗಳ ಶೇ. 100ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಜವಾಹರ್ ನವೋದಯ ವಿದ್ಯಾಲಯದ ಶೇ.99.94 ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದಾರೆ.
ಸರ್ಕಾರಿ ಶಾಲೆಗಳ ತೇರ್ಗಡೆ ಪ್ರಮಾಣ ಶೇ. 99.72ರಷ್ಟಿದೆ.

ಸುದ್ದಿ ಓದಿ