ಮಹಲಿಂಗಪುರ

ಕರ್ಮಶ್ರೇುಷ್ಠತೆಯಿಂದ ನರ ನಾರಾಯಣನಾಗುತ್ತಾನೆ, ನಾರಿ ಮಹಾಲಕ್ಷ್ಮಿಯಾಗುತ್ತಾಳೆ : ಮಾತಾಜಿ ಶಿವಲೀಲಾ

ಕರ್ಮಶ್ರೇುಷ್ಠತೆಯಿಂದ ನರ ನಾರಾಯಣನಾಗುತ್ತಾನೆ, ನಾರಿ ಮಹಾಲಕ್ಷ್ಮಿಯಾಗುತ್ತಾಳೆ : ಮಾತಾಜಿ ಶಿವಲೀಲಾ

ಮುತ್ತೈದೆ ಜಗನ್ಮಾತೆ ಸ್ವರೂಪಿಣಿ. ಸದಾ ತಾಳಿ, ಕುಂಕುಮ, ಬಳೆ, ಮೂಗುತಿ, ಕಾಲುಂಗುರ ಎಂಬ ಪಂಚ ನಿಶಾನೆ ಧರಿಸಿರಬೇಕು 

ಮಹಾಲಿಂಗಪುರ 19 : ಕರ್ಮಶ್ರೇುಷ್ಠತೆಯಿಂದ ನರ ನಾರಾಯಣನಾಗುತ್ತಾನೆ , ನಾರಿ ಮಹಾಲಕ್ಷ್ಮಿ ಜಗನ್ಮಾತೆಯಾಗುತ್ತಾಳೆ ಎಂದು ಸ್ಥಳೀಯ ಓಂ ಶಾಂತಿ ಸತ್ಸಂಗ ಸಂಸ್ಥೆಯ ಮಾತಾಜಿ ಶಿವಲೀಲಾ ಹೇಳಿದರು. 

ಸ್ಥಳೀಯ ಚನ್ನವೀರ ಶಿವಯೋಗಾಶ್ರಮದಲ್ಲಿ ಜರುಗಿದ ಶ್ರೀ ಜಗದೀಶ್ವರಿ ಉಡಿ ತುಂಬುವ 55 ನೇ ಉತ್ಸವದಲ್ಲಿ ಆಶಿರ್ವಚನ ನೀಡಿದ ಅವರು, ಜಗತ್ತಿಲ್ಲಿ ಪಾಪಾತ್ಮರು, ಪುಣ್ಯಾತ್ಮರು, ಮಹಾತ್ಮರು, ದೇವಾತ್ಮರು ಹಲವರಿರುವರು ಆದರೆ ಪರಮಾತ್ಮ ಒಬ್ಬನೇ. ನಾವೆಂದರೆ ಮೂಳೆ-ಮಾಂಸಗಳಿಂದಾದ ಶರೀರವಲ್ಲ, ನಾವೆಂದರೆ ಆತ್ಮ ಮಾತ್ರ. ಹಾಗಾಗಿ ಕೈಕರ್ಮದಲ್ಲಿದ್ದು ಕರ್ಮಯೋಗಿಗಳಾಗಿ ಆತ್ಮದಲ್ಲಿ ಸದಾ ಪರಮಾತ್ಮನ ನೆನವಿರಬೇಕು. ನಮ್ಮ ವಾಸದ ಮನೆ ನಮ್ಮ ಮನೆಯಲ್ಲ, ನಮ್ಮ ಆತ್ಮದ ಮನೆ ಅದು ಪರಂಧಾಮ(ಕೈಲಾಸ). ಪರಂಧಾಮಕ್ಕೆ ಹೋಗಲು ಆತ್ಮ ಪವಿತ್ರವಾಗಬೇಕು, ಶರೀರಕ್ಕೆ ಪಂಚತತ್ವಗಳಿರುವಂತೆ ಆತ್ಮಕ್ಕೆ ಜ್ಞಾನ, ಶಾಂತಿ, ಸುಖ, ಪ್ರೀತಿ, ಆನಂದ, ಶಕ್ತಿ, ಶುದ್ಧಿ ಎಂಬ 7 ತತ್ವಗಳಿಂದ ಆತ್ಮ ಪವಿತ್ರವಾಗುತ್ತದೆ. ಪರಮಾತ್ಮ ಈ ಗುಣಗಳ ಶ್ರೋತೃ.ಪರಮಾತ್ಮನ ನೆನೆವಿನಿಂದ ಬಹುಜನ್ಮದ ವಿಕಾರ ದೂರಾಗುವುದು, ಆತ್ಮದ ಮಲಿನ ಕಳೆಯುವುದು. 

ಮನುಷ್ಯ ಪಿತ ಮನುಷ್ಯ, ಪಶು ಪಿತ ಪಶು ಆದರೆ ಆತ್ಮಗಳ ಪಿತ ಪರಮಾತ್ಮ. ಪರಮಾತ್ಮನೇ ಸರ್ವರ ತಂದೆ, ತಾಯಿ, ಬಂಧು, ಬಳಗ ಸರ್ವ ಸಂಬಂಧ. 

ಮುತ್ತೈದೆ ಜಗನ್ಮಾತೆ ಸ್ವರೂಪಿಣಿ. ಅವಳು ಮಹಾಲಕ್ಷ್ಮಿಯಂತೆ ಸದಾ ತಾಳಿ, ಕುಂಕುಮ, ಬಳೆ, ಮೂಗುತಿ, ಕಾಲುಂಗುರ ಎಂಬ ಪಂಚ ನಿಶಾನೆ ಧರಿಸಿರಬೇಕು ಇದರಿಂದ ಮಾತ್ರ ಶ್ರೇಯಸ್ಸು ಎಂದು ಮತ್ತೈದೆತನದ ಪಾವಿತ್ರ್ಯತೆ ವಿವರಿಸಿದರು. 

ಎರಡು ದಿಗಳ ಉತ್ಸವದಲ್ಲಿ ರವಿವಾರ ರಾತ್ರಿಯಿಡೀ ಪ್ರವಚನ, ಶಿವಭಜನೆ ಜರುಗಿ ಭಾನುವಾರ ಬೆಳಿಗ್ಗೆಯಿಂದ ರುದ್ರಾಭಿಷೇಕ, ಜಗದೀಶ್ವರಿ ದೆವಿಯ ಮಹಾಪೂಜೆ, ಜಪಯಜ್ಞ, ಪ್ರವಚನ, ಉಡಿ ತುಂಬುವುದು, ಮಹಾಪ್ರಸಾದ  ಕಾರ್ಯಕ್ರಮಗಳು ಜರುಗಿದವು. ಬನಹಟ್ಟಿಯ ರಘುನಾಥ ಮಹಾರಾಜ, ಟ್ರಸ್ಟ್‌ ಕಮಿಟಿ ಅಧ್ಯಕ್ಷ ಡಾ.ಯು.ಎಸಸ್‌.ಸ್ವಾಮಿ ಹಿರೇಮಠ, ಜಯಶ್ರೀ ಹಿರೇಮಠ ವೇದಿಕೆಮೇಲಿದ್ದರು. 

ಮಹಾಲಿಂಗಪುರ ಅರ್ಬನ್ ಅಧ್ಯಕ್ಷ ಶೆಖರ ಅಂಗಡಿ, ಬಿಕೆ.ಜಾನಕ್ಕಿ. ಮಹಾದೇವಪ್ಪ ಮುತ್ತೂರ, ಬಸವರಾಜ ಪಾಶ್ಚಾಪುರ, ರಮೇಶ ಯಡಳ್ಳಿ, ವಿಠ್ಠಲ ರೇಗೇಕರ, ವಿಲಾಸ ಕುಳ್ಳೊಳ್ಳಿ, ಬ್ರಹ್ಮಾನಂದ ರಾವಳ, ಸಿದ್ಧಪ್ಪ ಯರನಾಳ, ಕಲ್ಲಪ್ಪ ಚಿನಿವಾಲ, ರವಿ ಶಿಲವಂತ, ನಂದ ಘಟ್ನಟ್ಟಿ, ಋಅಚಪ್ಪ ಚಿಚಖಂಡಿ, ಬಸಪ್ಪ ತಾಳಿಕೋಟಿ, ದುಂಡಪ್ಪ ಮಡಿವಾಳ, ಬಸವರಾಜ ಘಂಟಿ ಸಾವಿರಾರು ಮುತ್ತೈದೆಯರು, ಭಕ್ತರು ಇದ್ದರು. ಎಂ.ಬಿ.ಬಿರಾದಾರ ಪ್ರಸಾದ ವ್ಯವಸ್ಥೆ ಮಾಡಿದ್ದರು. 

ಸುದ್ದಿ ಓದಿ