ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಬಜೆಟ್ ಮಂಡನೆ ಅನುಕೂಲವಾಗಿದೆ: ಹಿಟ್ಟಿನಮಠ
ಬಸವರಾಜ ಹಿಟ್ಟಿನಮಠ ಅಧ್ಯಕ್ಷತೆಯಲ್ಲಿ ಪುರಸಭೆಯ 6 ಲಕ್ಷ 59 ಸಾವೀರ ಉಳಿತಾಯ ಬಜೆಟ್
ಮಹಾಲಿಂಗಪುರ ; ಪಟ್ಟಣದ ಪುರಸಭೆಯ ಸಭಾಭವನದಲ್ಲಿ ನಡೆದ ಪುರಸಭೆಯ 2022-23 ನೇ ಸಾಲೀನ ಪರಿಷ್ಕೃತ ಆಯ್ ವ್ಯೆಯದ ಅಂದಾಜು ಮತ್ತು 2023-24 ನೇ ಸಾಲೀನ ಅಯವ್ಯಯದಲ್ಲಿ ಪುರಸಭೆ ವಿವಿಧ ರೀತಿಯ 19 ಕೋಟಿ 35 ಲಕ್ಷ 7 ಸಾವೀರದಾ 874 ರೂ ಆಧಾಯ ವಾಗಿದ್ದು, ಪುರಸಭೆಯ ಎಲ್ಲತರಹದ ಖರ್ಚು 18 ಕೋಟಿ 96 ಲಕ್ಷ 98 ಸಾವೀರದಾ 350 ರೂ ಸೇರಿ ಒಟ್ಟು 6 ಲಕ್ಷ 59 ಸಾವೀರದಾ 5 ನೂರಾ 24 ರೂ ಗಳ ನಿವ್ವಳ ಆದಾಯದ ಬಜೆಟ್ನ್ನು ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಮಂಡಿಸಿದರು.
ಸಾರ್ವಜನಿಕರ ಹಿತ ಮತ್ತು ಪಟ್ಟಣದ ಸರ್ವತೋಮುಖ ಅಭಿವೃಧ್ದಿಯನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್ ಮಂಡನೆ ಮಾಡಲಾಗಿದೆ, ಇದಕ್ಕೂ ಹೆಚ್ಚಿನ ವಿಷಯಗಳನ್ನು ಪುರಸಭೆ ಸದಸ್ಯರು ಹೇಳಿದರೆ ಅದನ್ನು ಕೂಡಾ ಇದರಲ್ಲಿ ಸೇರಿಸಿಕೊಳ್ಳಲಾಗುವುದು. ಒಟ್ಟಿನಲ್ಲಿ ಪಟ್ಟಣದ ಅಭಿವೃಧ್ದಿಯೇ ಎಲ್ಲರ ಗುರಿಯಾಗಿರಬೇಕು ಎಂದರು.
ಪುರಸಭೆ ಸದಸ್ಯ ಜಾವೇದ ಬಾಗವಾನ ಮಾತನಾಡುತ್ತಾ ಬಜೆಟ್ ಮಂಡನೆಗೆ ಅಭಿನಂದನೆ ಸಲ್ಲಿಸಿ, ಈ ಬಜೆಟ್ ನಲ್ಲಿ ಕರೆ ಅಭಿವೃದ್ಧಿ, ಬಹಳ ದಿನಗಳಿಂದ ಮಟನ್ ಮಾರುಕಟ್ಟೆಗೆ ಹೆಚ್ಚಿನ ಬೇಡಿಕೆ ಇದ್ದು ಅದನ್ನು ಆದಷ್ಟು ಬೇಗ ಮಾಡಲು ಒತ್ತಾಯಿಸಿದರು. ಅಲ್ಲದೆ ಪಟ್ಟಣದ ಇನ್ನೂ ಹಲವಾರು ದೊಡ್ಡ ದೊಡ್ಡ ಯೋಜನೆಗಳನ್ನು ಮಾಡುವ ಮೂಲಕ ಪುರಸಭೆಯ ಕಾರ್ಯವೈಖರಿಯನ್ನು ಹೆಚ್ಚಿಸಬಹುದಾಗಿತ್ತು, ಅಲ್ಲದೆ ಪುರಸಭೆಯ ಪರವಾಣಿಗೆ ಇಲ್ಲದೆ ಎಲ್ಲಿಯೂ ಬ್ಯಾನರಗಳನ್ನು ಅಳವಡಿಸಬಾರದು ಎಂದರು.
ನಂತರ ಮಾತನಾಡಿದ ಪುರಸಭೆ ಸದಸ್ಯ ಪ್ರಲ್ಹಾದ ಸಣ್ಣಕ್ಕಿ ಡಬಲ್ ರಸ್ತೆಯಲ್ಲಿರುವ ಬಸವಣ್ಣ ದೇವಸ್ಥಾನದ ಹತ್ತಿರ ಮಟ್ನ ಅಂಗಡಿಯವರು ಮಟ್ನ ಕಟ್ ಮಾಡಿದ ಸಾಮಗ್ರಿಗಳನ್ನು ಅಲ್ಲೆ ಇರುವ ನೀರಿನ ನಳದಲ್ಲಿ ತೋಳೆಯುವುದು ಮಾಡುತ್ತಿದ್ದಾರೆ. ಇದರಿಂದ ಅಲ್ಲಿ ಗಲೀಜು ನಿರ್ಮಾಣವಾಗಿ ಅಲ್ಲಿ ಕುಡಿಯುವ ನೀರು ಇರುವುದಿರಂದ ಅಲ್ಲಿನ ಜನರಿಗೆ ಇದು ಮುಜುಗರ ಪಡುವಂತಾಗಿದೆ ಕೂಡಲೆ ಇದನ್ನು ಬಂದ ಮಾಡಿಸಿ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಸಿಗುವ ಹಾಗೆ ಮಾಡಿರಿ, ಅಲ್ಲದೆ ಪುರಸಭೆಯ ಮಳಿಗೆಗಳ ಬಾಡಿಗೆ ಸುಮಾರು ವರ್ಷಗಳಿಂದ ಬಾಕಿ ಉಳಿದಿದೆ ಈಗ ಅದು ಲಕ್ಷಗಟ್ಟಲೆ ಆಗಿದೆ ಕಾರಣ ಸ್ವಲ್ಪ ಬಾಡಿಗೆ ಕಡಿಮೆ ಮಾಡಿ ಬಾಡಿಗೆದಾರರಿಂದ ಬಾಡಿಗೆ ವಸೂಲಿ ಮಾಡಬೇಕು ಇದರಿಂದ ಪುರಸಭೆಗೂ ಹೆಚ್ಚು ಲಾಭವಾಗುತ್ತದೆ ಎಂದರು.
ನಂತರ ಮಾತನಾಡಿದ ಪುರಸಭೆ ಸದಸ್ಯ ಶೇಖರ ಅಂಗಡಿ ಪಟ್ಟಣದ ಕೆರೆ ಹತ್ತಿರವಿರುವ ಜಾಗೆಯಲ್ಲಿ ಒಂದು ಸುಂದರವಾದ ಗಾರ್ಡನ ಮಾಡಲು ಒತ್ತಾಯಿಸಿರು. ಮತ್ತು ಪಟ್ಟಣದ ಯಾವ ಜಾಗದಲ್ಲಾದರೂ ಒಂದು ಶುಮಿಂಗ ಫೂಲ್ ಮಾಡಬೇಕು ಇದರಿಂದ ಪಟ್ಟಣದ ಅಂದವೂ ಹೆಚ್ಚುತ್ತದೆ ಎಂದರು.
ನಂತರ ಮಾತನಾಡಿದ ಪುರಸಭೆ ಸದಸ್ಯ ರವಿ ಜವಳಗಿ ಪಟ್ಟಣದ ಡಬಲ್ ರಸ್ತೆಯಲ್ಲಿ ವೃತ್ತವನ್ನು ವಿವೇಕಾನಂದ ವೃತ್ತವೆಂದು ನಾಮಕರಣ ಮಾಡಲು ಈಹಿಂದೆ ಪುರಸಭೆಯಲ್ಲಿ ಮನವಿ ನೀಡಿದ್ದೇವೆ ಅದು ಠರಾವು ಆಗಿದ್ದರೆ ಕೂಡಲೆ ಆ ವೃತ್ತವನ್ನು ವಿವೇಕಾನಂದ ವೃತ್ತವೆಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು,
ನಂತರ ಮಾತನಾಡಿದ ಪುರಸಭೆ ಸದಸ್ಯ ಚನಬಸು ಯರಗಟ್ಟಿ ಮಾತನಾಡಿ ಪುರಸಭೆ ಎಲ್ಲ ಕೋಣೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ತಮ್ಮ ಹತ್ತಿರಬರುವ ಜನರನ್ನು ಕೆಲಸ ಮುಗಿದ ಕೂಡಲೆ ಅವರನ್ನು ಅಲ್ಲಿಂದ ಕಳಿಸಿ ಬೇರೆಯವರ ಕೆಲಸಕ್ಕೆ ಅನುಕೂಲ ಮಾಡಿಕೊಡಬೇಕು, ಅಲ್ಲದೆ ಪುರಸಭೆ ಸದಸ್ಯರು ಬಂದಾಗ ಯಾವ ಅಧಿಕಾರಿಗಳ ಹತ್ತಿರವೂ ಒಂದು ಕುರ್ಚಿಕೂಡಾ ಖಾಲಿ ಇರುವುದಿಲ್ಲ ಹೀಗಾದರೆ ಸದಸ್ಯರು ಸಾರ್ವಜನಿರ ಸಮಸ್ಯೆಗಳನ್ನು ನಿಮ್ಮ ಮುಂದೆ ಹೇಳಿಕೊಳ್ಳುವುದು ಹೇಗೆ ಎಂದರು.
ನಂತರ ಮಾತನಾಡಿದ ಪುರಸಭೆ ಸದಸ್ಯ ರಾಜು ಚಮಕೇರಿ ಪುರಸಭೆಯಲ್ಲಿ ನಿರ್ಧಾರವಾಗುವ ನಿಯಮಗಳನ್ನು ಸೂಚನಾ ಫಲಕದಲ್ಲಿ ಅಳವಡಿಸಿ ಸಾರ್ವಜನಿಕರಿಗೆ ತಿಳಿಯುವಂತೆ ಮಾಡಿ ಎಂದರು.
ಈ ಎಲ್ಲ ಸಮಸ್ಯೆಗಳನ್ನು ಆಲಿಸಿದ ಪುರಸಭೆ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿ ಜಗದೀಶ ಈಟಿ ಸೇರಿ ಕೂಡಲೇ ಎಲ್ಲ ಸಮಸ್ಯೆಗಳ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಚೇರಮನ್ ಬಲವಂತಗೌಡ ಪಾಟೀಲ, ಪುರಸಭೆ ಸದಸ್ಯರಾದ ಯಲ್ಲನಗೌಡ ಪಾಟೀಲ, ಸಜನಸಾಬ ಪೆಂಡಾರಿ, ಮುಸ್ತಾಕ ಚಿಕ್ಕೋಡಿ, ರಾಜು ಗೌಡಪ್ಪಗೋಳ, ಬಸವರಾಜ ಬುರುಡ,ಚಾಂದನಿ ನಾಯಕ, ಸ್ನೇಹಲ್ ಅಂಗಡಿ, ಲಕ್ಷ್ಮೀ ಮುದ್ದಾಪುರ, ಸವಿತಾ ಕೋಳಿಗುಡ್ಡ, ಶೀಲಾ ಬಾವಿಕಟ್ಟಿ, ಸವಿತಾ ಹುರಕಡ್ಲಿ, ಸುಜಾತಾ ಮಾಂಗ, ಈರ್ಪ ಚುನಮರಿ,ಜಯವಂತ ಕಾಗಿ, ಅರ್ಜುನ ಮೋಪಗಾರ, ತಿಪ್ಪಣ್ಣ ಬಂಡಿವಡ್ಡರ, ಸಿಬ್ಬಂದಿಗಳಾದ ಮಾನಿಂಗ ಮುಗಳಖೋಡ, ವ್ಹಿ.ಜಿ ಕುಲಕಣಿ, ಬಿ.ವಾಯ್ ಮರ್ದಿ, ಎಸ್.ಎನ್ ಪಾಟೀಲ, ಸಿದ್ದು ಅಳ್ಳಿಮಟ್ಟಿ, ರಾಜು ಹೂಗಾರ, ಸಮೀರ ನಾಯಕ, ಚನ್ನಮ್ಮ ಕಮತಗಿ, ರಾಜೇಶ್ವರಿ ಸೋರಗಾಂವಿ, ರಾಮು ಮಾಂಗ, ಮಾನಿಂಗ ಮಾಂಗ ಸೇರಿದಂತೆ ಹಲವರು ಇದ್ದರು.
ಫೋಟೋ; 28 ಎಂ.ಎಲ್.ಪಿ.1
ಮಹಾಲಿಂಗಪುರ ; ಪುರಸಭೆಯ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ 2022-23 ರೂ 2023-24 ನೇ ಸಾಲೀನ ಅಯವ್ಯಯದ ಉಳಿತಾಯ ಬಜೇಟ್ ಮಂಡಿಸಿದರು.