ಬೇರೆಡೆಗೆ ತೆರಳಿದ ಕಾರ್ಯಕರ್ತರನ್ನು ಮರಳಿ ಪಕ್ಷಕ್ಕೆ ಕರೆತನ್ನಿ: ಬಿಜೆಪಿ ಮುಖಂಡ ಮಡಿವಾಳಪ್ಪ ಬೀದರಗಡ್ಡಿ
ಯರಗಟ್ಟಿ 04 : ಬೇರೆಡೆಗೆ ಹೋಗಿರುವ ಕಾರ್ಯಕರ್ತರನ್ನು ಮರಳಿ ಪಕ್ಷಕ್ಕೆ ತರುವ ಕೆಲಸ ಮಾಡಬೇಕು ಎಂದು ಬಿಜೆಪಿ ಮುಖಂಡ ಮಡಿವಾಳಪ್ಪ ಬೀದರಗಡ್ಡಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ''ಮುಂದಿನ ಚುನಾವಣೆಯೊಳಗಾಗಿ ಕ್ಷೇತ್ರದಲ್ಲಿ ಬಿಜೆಪಿ ಬಲವರ್ಧನೆ ಮಾಡಬೇಕಾಗಿದೆ. ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲರೂ ಸೇರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು. ಈ ಸಂದರ್ಭದಲ್ಲಿ ಕುಮಾರ ಹಿರೇಮಠ, ಶಿವಾನಂದ ಪಟ್ಟಣಶೆಟ್ಟಿ, ಸುರೇಶ ಬಂಟನೂರ, ಈರಣ್ಣ ಮಠಪತಿ, ನಾಗಪ್ಪ ಪುಂಜಿ, ರಾಮನಗೌಡ ಗಂಗರಡ್ಡಿ, ಅಶೋಕ ಪಟ್ಟಣಶೆಟ್ಟಿ, ಇಮ್ಮಿಯಾಜ್ ಖಾದ್ರಿ, ಮುದಕಪ್ಪ ತಡಸಲೂರ, ಇಮಾಮಸಾಬ ಹುಸೇನಾಯ್ಕರ, ಉದಯ ಹಾರುಗೊಪ್ಪ, ಕಾಶೀಂಅಲಿ ನದಾಫ್, ಅಣ್ಣಾಸಾಹೇಬ ಸುಭೇದಾರ, ಉದಯ ಹಾರುಗೋಪ್ಪ, ಚಂದ್ರು ತಲ್ಲೂರು, ತರರಿದ್ದರು.