ಬಾಕ್ಸಿಂಗ್: ಸೆಮಿಫೈನಲ್ಸ್ ಪ್ರವೇಶಿಸಿದ ಲೊವ್ಲಿನಾ

ಬಾಕ್ಸಿಂಗ್: ಸೆಮಿಫೈನಲ್ಸ್ ಪ್ರವೇಶಿಸಿದ ಲೊವ್ಲಿನಾ

ಟೋಕಿಯೊ, ಜು.30 ಟೋಕಿಯೊ ಒಲಿಂಪಿಕ್ಸ್‌ನ ಬಾಕ್ಸಿಂಗ್ ಸ್ಪರ್ಧೆಯ ಸೆಮಿಫೈನಲ್‌ಗೆ ಭಾರತದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಲೊವ್ಲಿನಾ 4-1 ರಿಂದ ಚೀನಾದ ತೈಪೆಯ ಚೆನ್ ನಿಯೆನ್ ಚಿನ್ ಅವರನ್ನು ಮಣಿಸಿ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿಕೊಂಡರು.

ಈ ಕ್ರೀಡಾಕೂಟಗಳಲ್ಲಿ ಭಾರತಕ್ಕೆ ಇದು ಎರಡನೇ ಪದಕ ಮತ್ತು ಬಾಕ್ಸಿಂಗ್‌ನಲ್ಲಿ ಮೂರನೇ ಪದಕವಾಗಿದೆ. ಈ ಹಿಂದೆ, 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಟಾರ್ ಬಾಕ್ಸರ್ ಮೇರಿ ಕೋಮ್ ಕಂಚಿನ ಪದಕ ಗೆದ್ದಿದ್ದರು. ಮತ್ತು 2008 ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ವಿಜೇಂದರ್ ಸಿಂಗ್ ಕಂಚಿನ ಪದಕ ಗೆದ್ದಿದ್ದರು.
ಈ ಮೊದಲು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದರು.
ಟೋಕಿಯೊ 2020 ರ ಸೆಮಿಫೈನಲ್ ತಲುಪುವ ಮೂಲಕ ಕಂಚಿನ ಪದಕ ಪಡೆಯುವ ಭರವಸೆ ಪಡೆದಿರುವ ಭಾರತೀಯ ಬಾಕ್ಸರ್ ಲೊವ್ಲಿನಾ, ಅಗ್ರ ಶ್ರೇಯಾಂಕಿತ ಟರ್ಕಿಶ್ ಬಾಕ್ಸರ್ ಬಸೆನಾಜ್ ಸುರ್ಮೆನೆಲ್ಲಿ ಅವರನ್ನು ಎದುರಿಸಲಿದ್ದಾರೆ.
ಪ್ರಸ್ತುತ ವಿಶ್ವ ಚಾಂಪಿಯನ್ ಬಸೆನಾಜ್ ವಿರುದ್ಧ ಲೊವ್ಲಿನಾ ಅವರ ಈ ಪಂದ್ಯವು ಆಗಸ್ಟ್ 4 ರ ಬುಧವಾರದಂದು ಬೆಳಿಗ್ಗೆ 11.00 ಗಂಟೆಗೆ ನಡೆಯಲಿದೆ.

ಸುದ್ದಿ ಓದಿ