ರಬಕವಿಯಲ್ಲಿ ಜೂನ್ 11 ರಂದು ಪುಸ್ತಕಾವಲೋಕನ
ರಬಕವಿ-ಬನಹಟ್ಟಿ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕು ಘಟಕ ರಬಕವಿ-ಬನಹಟ್ಟಿ, ವಲಯಗಳಾದ ತೇರದಾಳ, ಮಹಾಲಿಂಗಪುರ ಇವರ ಸಂಯುಕ್ತಾಶ್ರಯದಲ್ಲಿ ಜೂನ್ 11, ರವಿವಾರ ಸಂಜೆ ಸರಿಯಾಗಿ 6 ಗಂಟೆಗೆ ಪುಸ್ತಕವಲೋಕನ-18 ಕಾರ್ಯಕ್ರಮವನ್ನು ರಬಕವಿಯ ಬ್ರಹ್ಮಾನಂದ ನಗರದಲ್ಲಿರುವ ಪರಪಣ್ಣ ಪೂಜೇರಿ ಅವರ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಸಾಪ ಪ್ರಕಟನೆ ತಿಳಿಸಿದೆ. ಆಕಾಶವಾಣಿ ಧಾರವಾಡ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರು, ಹಿರಿಯ ಸಾಹಿತಿ ಡಾ. ಬಸು ಬೇವಿನಗಿಡದ ಅವರ ಶತಮಾನದ ಕವಿ ಡಾ. ದ.ರಾ. ಬೇಂದ್ರೆ ಕೃತಿಯನ್ನು ತಾಲೂಕು ಕಸಾಪ ಅಧ್ಯಕ್ಷ ಮ.ಕೃ.ಮೇಗಾಡಿ ಅವಲೋಕಿಸುವರು.
ಪ್ರಗತಿಪರ ರೈತರಾದ ಪರಪಣ್ಣ ಪೂಜೇರಿ ಅಧ್ಯಕ್ಷತೆ ವಹಿಸುವರು. ಆಕಾಶವಾಣಿ ಧಾರವಾಡ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರು, ಕತೆಗಾರರು, ಅನುವಾದಕರಾದ ಡಾ. ಬಸು ಬೇವಿನಗಿಡದ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ತಾಲೂಕಿನ ಹಿರಿಯ ಸಾಹಿತಿಗಳು, ಕಲಾವಿದರು, ಸಾಹಿತ್ಯಾಸಕ್ತರು, ಕಸಾಪ ತಾಲೂಕು, ವಲಯಗಳ ಪದಾಧಿಕಾರಿಗಳು, ಕಸಾಪ ಸದಸ್ಯರು ಭಾಗವಹಿಸುವರು ಎಂದು ಕಸಾಪ ಗೌರವ ಕಾರ್ಯದರ್ಶಿ ಶ್ರೀಶೈಲ ಬುರ್ಲಿ, ಕೋಶಾಧ್ಯಕ್ಷ ಡಿ.ಬಿ. ಜಾಯಗೊಂಡ ತಿಳಿಸಿದ್ದಾರೆ.