ಬಾಂಬ್ ಬೆದರಿಕೆ : ಐಫೆಲ್ ಟವರ್ ನಲ್ಲಿ ಪ್ರವಾಸಿಗರ ತೆರವು
ಪ್ಯಾರಿಸ್, ಸೆ 23 : ಬಾಂಬ್ ಇರಿಸಲಾಗಿದೆ ಎಂಬ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಪ್ಯಾರಿಸ್‌ನಲ್ಲಿರುವ ಸುಪ್ರಸಿದ್ಧ ಐಫೆಲ್ ಟವರ್ ನಲ್ಲಿದ್ದ ಪ್ರವಾಸಿಗರನ್ನು ತೆರವುಗೊಳಿಸಲಾಗಿದೆ.
ಬಾಂಬ್ ಕರೆ ಬಂದ ಬೆನ್ನಲ್ಲೇ ಪೊಲೀಸರು ಬುಧವಾರ ಬೆಳಿಗ್ಗೆ ಸ್ಥಳದಲ್ಲಿದದ ಸಂದರ್ಶಕರನ್ನು ಪೊಲೀಸರು ಸ್ಥಳಾಂತರಿಸಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.
ಬಾಂಬ್ ಪತ್ತೆಗಾಗಿ ಭದ್ರತಾ ಪಡೆಗಳು ತಪಾಸಣೆ ನಡೆಸುತ್ತಿವೆ. ಗೋಪುರದ ಸುತ್ತಲಿನ ಪ್ರದೇಶದಲ್ಲಿ ಪ್ರಸ್ತುತ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಮಾಧ್ಯಮಗಳು ತಿಳಿಸಿವೆ.