ವಿಜಯಪುರ

ವಿಶ್ವ ಅಂಗದಾನ ದಿನದ ಅಂಗವಾಗಿ ದೇಹ ಚಿತ್ರಕಲೆ ಸ್ಪರ್ಧೆ

ವಿಶ್ವ ಅಂಗದಾನ ದಿನದ ಅಂಗವಾಗಿ ದೇಹ ಚಿತ್ರಕಲೆ ಸ್ಪರ್ಧೆ

ವಿಜಯಪುರ 14 :  ವಿಶ್ವ ಅಂಗದಾನ ದಿನದ ಅಂಗವಾಗಿ ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಎ.ವಿ.ಎಸ್‌. ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ರಚನಾ ಶರೀರ ವಿಭಾಗದ ವತಿಯಿಂದ ಅಂತರ-ಮಹಾವಿದ್ಯಾಲಯ ದೇಹ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.  ಸ್ಪರ್ಧೆಯಲ್ಲಿ ಬಿ.ಎಲ್‌.ಡಿ.ಇ ಸಂಸ್ಥೆಯ ಎ.ವಿ.ಎಸ್‌. ಆಯುರ್ವೇದ ಮಹಾವಿದ್ಯಾಲಯ, ಆರ್‌.ಕೆ.ಎಂ. ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಬಿ.ಎನ್‌.ಎಂ. ನಾಗೂರ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಹಾಗೂ ಲುಕ್ಮಾನ್ ಯುನಾನಿ ಮೆಡಿಕಲ್ ಕಾಲೇಜು ಸೇರಿದಂತೆ ನಾಲ್ಕು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳ ಒಟ್ಟು 22 ತಂಡಗಳು ಭಾಗವಹಿಸಿದ್ದವು.  

ಕಾರ್ಯಕ್ರಮದಲ್ಲಿ ಬಿ.ಎಲ್‌.ಡಿ.ಇ ಸಂಸ್ಥೆಯ ಎ.ವಿ.ಎಸ್‌. ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ್ ಪಾಟೀಲ್, ಆಯೋಜನಾ ಕಾರ್ಯದರ್ಶಿ ಡಾ. ಶಿವಕುಮಾರ್ ಯರಗಲ್, ಸಹ-ಆಯೋಜನಾ ಕಾರ್ಯದರ್ಶಿ ಡಾ. ರಫಿಯಾಬಾನು ತಾಳಿಕೋಟಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.  ಬಿ.ಎಲ್‌.ಡಿ.ಇ ಡೀಮ್ಡ್‌ ಟು ಬಿ ಯೂನಿವರ್ಸಿಟಿಯ ರಚನಾ ಶರೀರ ವಿಭಾಗದ ಡಾ. ಆರ್‌.ಎಸ್‌. ಬುಲಗೌಡ ಹಾಗೂ ಡಾ. ಖುರೇಶಿ ಅವರು ತೀಪುಗಾರರಾಗಿ ಭಾಗವಹಿಸಿದ್ದರು.  

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಆರ್‌.ಎಸ್‌. ಬುಲಗೌಡ, ದೇಹದ ವಿವಿಧ ಅಂಗಾಂಗಗಳನ್ನು ಕಲಾತ್ಮಕವಾಗಿ ಚಿತ್ರಿಸುವ ಮೂಲಕ ವಿದ್ಯಾರ್ಥಿಗಳ ರಚನಾ ಶರೀರಶಾಸ್ತ್ರದ ಜ್ಞಾನ, ಸೃಜನಶೀಲತೆ, ತಂಡದ ಕಾರ್ಯಕ್ಷಮತೆ ಹಾಗೂ ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿಸುವುದು ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.  ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಮುಂದಿನ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಕಾಲೇಜಿನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 


ಸುದ್ದಿ ಓದಿ