ಪಾಕಿಸ್ತಾನದಲ್ಲಿ ದೋಣಿ ದುರಂತ: ನಾಲ್ವರ ಸಾವು - 17 ಮಂದಿ ಕಣ್ಮರೆ
ಇಸ್ಲಾಮಾಬಾದ್, ಜುಲೈ 22ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಬಜೌರ್ ಜಿಲ್ಲೆಯ ಜಲಾಶಯದಲ್ಲಿ ಮೂರು ದೋಣಿಗಳು ಮುಳುಗಡೆಯಾಗಿ ಕನಿಷ್ಠ 4 ಮಂದಿ ಸಾವನ್ನಪ್ಪಿದ್ದು, ಇತರೆ 17 ಮಂದಿ ಕಾಣೆಯಾಗಿದ್ದಾರೆ .
ಸ್ಥಳೀಯ ಮಾಧ್ಯಮಗಳ . ವರದಿಗಳ ಪ್ರಕಾರ, ಜಿಲ್ಲೆಯ ರಾಘಗನ್ ಅಣೆಕಟ್ಟಿನಲ್ಲಿ 18 ಜನರೊಂದಿಗೆ ದೋಣಿ ಪ್ರವಾಸದಲ್ಲಿದ್ದಾಗ ನೀರಿನಲ್ಲಿ ಮುಳುಗಿತು. ಅಪಘಾತದ ಸ್ವಲ್ಪ ಸಮಯದ ನಂತರ, ಮುಳುಗಿದ ಪ್ರವಾಸಿಗರನ್ನು ರಕ್ಷಿಸಲು ಹೋದ ಎರಡು ದೋಣಿಗಳು ಸಹ ಜಲಾಶಯದಲ್ಲಿ ಮುಳುಗಿವೆ ಎಂದೂ ವರದಿಯಾಗಿದೆ.
ರಕ್ಷಣಾ ತಂಡದ ಮತ್ತೊಂದು ತಂಡ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿ ನಂತರ ನಾಲ್ಕು ಜನರನ್ನು ರಕ್ಷಿಸಿ, ಮತ್ತು ಜಲಾಶಯದಿಂದ ಮತ್ತೆ ನಾಲ್ಕು ಶವಗಳನ್ನು ಹೊರತೆಗೆದಿದೆ.
ಕಾಣೆಯಾದವರಿಗಾಗಿ ವ್ಯಾಪಕ ಶೋಧನೆ ನಡೆಸಲಾಗುತ್ತಿದೆ ಎಂದು ರಕ್ಷಣಾ ತಂಡ ಮಾಧ್ಯಮಗಳಿಗೆ ತಿಳಿಸಿವೆ. ಸ್ಥಳೀಯ ಪೊಲೀಸರ ಪ್ರಕಾರ ಅತಿಯಾಗಿ ಹೆಚ್ಚು ಜನರು ದೋಣಿಯಲ್ಲಿ ಪ್ರಯಾಣ ಮಾಡುತ್ತಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಇಸ್ಲಾಮಾಬಾದ್, ಜುಲೈ 22 ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಬಜೌರ್ ಜಿಲ್ಲೆಯ ಜಲಾಶಯದಲ್ಲಿ ಮೂರು ದೋಣಿಗಳು ಮುಳುಗಡೆಯಾಗಿ ಕನಿಷ್ಠ 4 ಮಂದಿ ಸಾವನ್ನಪ್ಪಿದ್ದು, ಇತರೆ 17 ಮಂದಿ ಕಾಣೆಯಾಗಿದ್ದಾರೆ .