ಮೋದಿ ಜನ್ಮದಿನದ ಅಂಗವಾಗಿ ಬಿಜೆಪಿ ಯುವ ಮೋರ್ಚಾದಿಂದ ರಕ್ತದಾನ ಶಿಬಿರ
ಲೋಕದರ್ಶನ ವರದಿ
ಹಾವೇರಿ, ಸೆ. 24: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಬಿಜೆಪಿ ಹಾವೇರಿ ನಗರ ಮಂಡಲದ ಯುವ ಮೋರ್ಚಾ ವತಿಯಿಂದ ‘ಸೇವಾ ಸಂಕಲ್ಪ ಅಭಿಯಾನ’ದಡಿ ನಗರದ ಶ್ರೀರಾಮ ಮಂದಿರ ದೇವಸ್ಥಾನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಮಾಜಿ ಶಾಸಕ ಶಿವರಾಜ ಸಜ್ಜನರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಶಿಬಿರದಲ್ಲಿ ಸುಮಾರು 34 ಮಂದಿ ಮೋದಿ ಅಭಿಮಾನಿ ಕಾರ್ಯಕರ್ತರು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ್, ನಗರ ಮಂಡಲದ ಅಧ್ಯಕ್ಷ ಕಿರಣ ಟಿ. ಕೊಳ್ಳಿ, ಡಾ. ಸಂತೋಷ ಆಲದಕಟ್ಟಿ, ಕಿರಣ ಕೋಣನವರ್, ನೀಲಪ್ಪ ಚಾವಡಿ, ನಾಗೇಂದ್ರ ಕಡಕೋಳ, ಹನುಮಂತಪ್ಪ ಬಾದವಿನಾಯಕ, ಮಂಜುನಾಥ ಮಲಗೋಡ, ಗುಡ್ಡಪ್ಪ ಭರಡಿ, ನಾಗರಾಜ ಹರಿಗೋಳ, ಮಹಾಲಿಂಗಸ್ವಾಮಿ ಹಿರೇಮಠ, ಮೃತ್ಯುಂಜಯ ಮುಷ್ಠಿ, ಅಲ್ಲಾಭಕ್ಷ ತಿಮ್ಮಾಪುರ,
ವಿಜಯಕುಮಾರ ಚಿನ್ನಿಕಟ್ಟಿ, ನಿಂಗರಾಜ ಯರೇಶಿಮಿ, ಅಭಿಷೇಕ ಗುಡಗೂರು, ಆನಂದ ಕಲಾಲ್, ಕುಮಾರ ಹತ್ತಿ, ಯಲ್ಲಪ್ಪ ಮಡಿವಾಳರ, ವಿವೇಕ ಇಂಗಳಗಿ, ಸದಾನಂದ ಸುರಳಿಹಳ್ಳಿ, ಗೀರೀಶ ಶೆಟ್ಟರ್, ಆನಂದ ಕಪ್ಪರದ, ಸುನೀಲ ಬೇಟಗೇರಿ, ನಿಖಿಲ್ ಹಿರೇಮಠ, ರಘು, ರೋಹಿಣಿ ಪಾಟೀಲ, ವಿಜಯಲಕ್ಷ್ಮೀ ಹೆಗಡೆ, ಲಲಿತಾ ಗುಂಡೇನಹಳ್ಳಿ ಹಾಗೂ ಉಮಾ ಚೌಕಿಮಠ ಸೇರಿದಂತೆ ಜಿಲ್ಲಾ ರಕ್ತನಿಧಿ ಕೇಂದ್ರದ ಸಿಬ್ಬಂದಿ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.