ಅಂಧರಿಗೆ ಸಾಧಿಸುವ ಛಲ ಅಪಾರವಿದೆ: ಉಪಸಭಾಪತಿ ರುದ್ರ್ಪ ಲಮಾಣಿ
ರಾಣಿಬೆನ್ನೂರ 21: ಸಮಾಜದಲ್ಲಿ ಅಂಧರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾದರೆ ಎಲ್ಲರ ಸಹಕಾರ ಬಹಳಷ್ಟು ಅಗತ್ಯವಿದೆ ಎಂದು ವಿಧಾನಸಭಾ ಉಪಸಭಾಪತಿ ರುದ್ರ್ಪ ಲಮಾಣಿ ಹೇಳಿದರು. ನಗರದ ಬಿ.ಎ.ಜೆ.ಎಸ್.ಎಸ್ ಮಹಾವಿದ್ಯಾಲಯದಲ್ಲಿ ಈಚೆಗೆ ಜ್ಞಾನವಂದನಾ ಸಂಸ್ಥೆಯಂದ ಏರಿ್ಡಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಆಫ್ಲೈನ್ ತರಗತಿ, ವಿದ್ಯಾರ್ಥಿಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಧರಿಗೆ ದೇವರು ಅವರಿಗೆ ವಿಶಿಷ್ಠವಾದ ಶಕ್ತಿಯನ್ನು ನೀಡಿದ್ದು ಅವರಿಗೆ ಸಾಧಿಸುವ ಛಲ ಅಪಾರವಾಗಿರುತ್ತದೆ. ಅವರಿಗೆ ಪ್ರೋತ್ಸಾಹ ನೀಡಿದಲ್ಲಿ, ಅವರು ಎಲ್ಲಾ ಸವಾಲುಗಳನ್ನು ಎದುರಿಸಬಲ್ಲರು ಎಂದರು.
ರಾಮಕೃಷ್ಣಾಶ್ರಮದ ಪ್ರಕಾಶಾನಂದಜಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕ ಪ್ರಕಾಶ ಕೋಳಿವಾಡ, ಸಂಸ್ಥೆಯ ಆಡಳಿತಾಧಿಕಾರಿ ಆರ್.ಎಂ.ಕುಬೇರ್ಪ ಮಾತನಾಡಿದರು. ಜಿ.ಎಂ ಬತ್ತಿಕೊಪ್ಪದ, ರವೀಂದ್ರಗೌಡ ಪಾಟೀಲ, ಕೆ.ಸಿ ನಾಗರಜ್ಜಿ, ರುಕ್ಮೀಣಿ ಸಾವುಕಾರ, ವಿ.ಎಸ್. ಹಿರೇಮಠ, ಪರಮೇಶಯ್ಯ ಮಠದ, ವೀರಯ್ಯಾ ಹೊಳಗುಂದಿಮಠ, ರಾಮಚಂದ್ರರೆಡ್ಡಿ ಬಜರೆಡ್ಡಿ, ಕೃಷ್ಣಸಾ ಲದ್ವ, ಅಚ್ಯುತ ನಾಯಕ, ಕುಮಾರ ಸಿ, ಗಣೇಶ ಅರ್ಕಾಚಾರಿ, ಬಿ.ಕೆ ರಾಜನಹಳ್ಳಿ, ಪ್ರಭು ಅರ್ಕಾಚಾರಿ, ಪಟವರ್ಧನ ಇದ್ದರು.