ಸಿರುಗುಪ್ಪ

ಮೌಲಾನಾ ಅಬುಲ್ ಕಲಾಂ ಆಜಾದ್‌ರ ಜನ್ಮ ದಿನಾಚರಣೆ

ಮೌಲಾನಾ ಅಬುಲ್ ಕಲಾಂ ಆಜಾದ್‌ರ  ಜನ್ಮ ದಿನಾಚರಣೆ

ಲೋಕದರ್ಶನ ವರದಿ 

ಸಿರುಗುಪ್ಪ 12: ನಮ್ಮೆಲ್ಲರಿಗೂ 1947ರಲ್ಲಿ ಸಿಕ್ಕಿದ ಸ್ವಾತಂತ್ರ್ಯದಿಂದಾಗಿ ನಾವು ಇಂದು ರಾಷ್ಟ್ರವಾಗಿ ಎತ್ತರದಲ್ಲಿ ಮತ್ತು ಸ್ವತಂತ್ರ್ಯವಾಗಿ ನಿಂತಿದ್ದೇವೆ ಮಹಾತ್ಮಾ ಗಾಂಧೀಜಿ ಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳುವಳಿ ಅನನ್ಯ ತ್ಯಾಗವನ್ನು ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ ಲಕ್ಷಾಂತರ ಜೀವಿಗಳು ಬಲಿಯಾದವು ಲಕ್ಷಾಂತರ ಕುಟುಂಬಗಳು ನಾಶವಾದವು. ಭಾರತೀಯ ರೆಲ್ಲರೂ ಮಹಾತ್ಮರ ತ್ಯಾಗವನ್ನು ಗೌರವಿಸಬೇಕು ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ರಾಜ್ಯ ಸಂಪನ್ಮೂಲ ಕೇಂದ್ರ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯರು ಶಿಕ್ಷಣ ಪ್ರೇಮಿ ಬಿಸ್ಮಿಲ್ಲಾ ವಿದ್ಯಾಸಂಸ್ಥೆ ಅಧ್ಯಕ್ಷ ಎ.ಅಬ್ದುಲ್ ನಬಿ ಹೇಳಿದರು.  


ನಗರದ ಇಬ್ರಾಹಿಮ್ ಮಂಜಿಲ್‌ನಲ್ಲಿ 75ನೇ ಆಜಾದಿ ಕಾ ಅಮೃತ ಮಹೋತ್ಸವ ಸ್ವಾತಂತ್ರ್ಯ ಭಾರತದ ಪ್ರಥಮ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ 134ನೇ ಜನ್ಮದಿನ ರಾಷ್ಟ್ರೀಯ ಶಿಕ್ಷಣ ದಿನವನ್ನು ನೆನಪಿಸಿ ಗೌರವಿಸಿ ಸ್ಮರಿಸಿ ಅವರು ಮಾತನಾಡಿದರು ಸರ್ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ ಅವರು ಮಾತನಾಡಿ ಭಾರತ ದೇಶದ 136ಕೋಟಿ ಜನ ಭಾರತೀಯರಿಗಾಗಿ ಅಂದು ತಂತ್ರಜ್ಞಾನ ಸಂಸ್ಥೆ ಐಐಟಿ ವಿಶ್ವ ವಿದ್ಯಾಲಯ ಯೂನಿವರ್ಸಿಟಿ ಯುಜಿಸಿ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಐಸಿಸಿಆರ್ ಕೌನ್ಸಿಲ್ ಆಫ್ ಸೈಂಟಿಫಿಕ್ ್ಘ ಇಂಡಸ್ಟ್ರಿಯಲ್ ರಿಸರ್ಚ್‌ ಸಿಎಸ್ ಐಆರ್ ಸಂಸ್ಥೆಗಳನ್ನು ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಸ್ಥಾಪಿಸಿದ್ದು ಇಂದು ಆಜಾದ್ ಅವರ ದೂರ ದೃಷ್ಟಿಗೆ ಸಾಕ್ಷಿಯಾಗಿದೆ ಅವರು ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಜನಿಸಿದರು.  


ಸ್ವತಂತ್ರ ಭಾರತ ದೇಶದ ಪ್ರಥಮ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಶೈಕ್ಷಣಿಕ ನಿರ್ಮಾತೃ ಎಂದು ಕಾಂಗ್ರೆಸ್ ಮುಖಂಡರಾದ ಜಮೀನ್ದಾರ್ ಹಾಜಿ ಸೈಯದ್ ಶಾ ಮೊಹಿಯುದ್ದೀನ್ ಖಾದ್ರಿ ಹಾಜಿ ಸೈಯದ್ ಅಹ್ಮದ್ ಖಾದ್ರಿ ಮತ್ತು ಅವರ ಸಹೋದರರು ತಾಲ್ಲೂಕು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ ಖತೀಬ್ ಜಹೀರುದ್ದೀನ್ ಬಾಬು ಮೊಹಮ್ಮದ್ ಖಲೀಲ್ ಸಮಾಜ ಸೇವಕರಾದ ಎ.ಮೊಹಮ್ಮದ್ ಇಬ್ರಾಹಿಂ ಎ.ಮೊಹಮ್ಮದ್ ನೌಶಾದ್ ಅಲಿ ಈದ್ಗಾ ಮತ್ತು ಅವರ ಸ್ಥಾನ ಕಮಿಟಿ ಅಧ್ಯಕ್ಷ ಹಂಡಿ ಹಾಶಿಮ್ ಮತ್ತಿತರರು ಅವರು ಉಪಸ್ಥಿತರಿದ್ದು ನುಡಿದರು. 


ಸುದ್ದಿ ಓದಿ