ಮಾಜಿ ಪ್ರಧಾನಿ ರಾಜೀವ್ ಗಾಂಧಿ, ದಿ. ದೇವರಾಜ ಅರಸು ರವರ ಹುಟ್ಟುಹಬ್ಬ ಆಚರಣೆ

ಮಾಜಿ ಪ್ರಧಾನಿ ರಾಜೀವ್ ಗಾಂಧಿ, ದಿ. ದೇವರಾಜ ಅರಸು ರವರ ಹುಟ್ಟುಹಬ್ಬ ಆಚರಣೆ

ಹೊಸಪೇಟೆ 20: ವಿಜಯನಗರ ವಿಧಾನ ಸಭಾ ಕ್ಷೇತ್ರದ  ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಮತ್ತು ಮಾಜಿ ಮುಖ್ಯಮಂತ್ರಿಗಳಾದ ದಿ. ದೇವರಾಜ ಅರಸು ರವರ ಹುಟ್ಟುಹಬ್ಬದ ಆಚರಣೆಯನ್ನು ಹಮ್ಮಿಕೊಳ್ಳಲಾಯಿತು.  

ಕಾರ್ಯಕ್ರಮವನ್ನು ಉದ್ದೇಶಿಸಿ, ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ  ಅಧ್ಯಕ್ಷ ಹೆಚ್‌.ಎನ್ ಮೊಹಮ್ಮದ್ ಇಮಾಮ್ ನಿಯಾಜಿರವರು ಮಾತನಾಡಿ ನಾಡಿನ ಭಾರತ ದೇಶದ ಮಾಜಿ ಪ್ರಧಾನಿಗಳಾದ ದಿ. ರಾಜೀವ್ ಗಾಂಧಿಯವರ ಮತ್ತು ಮಾಜಿ ಮುಖ್ಯಮಂತ್ರಿಗಳಾದ ದಿ. ದೇವರಾಜ ಅರಸು ರವರ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳನ್ನು ತಿಳಿಸಿದರು. 

ದೇವರಾಜ್ ಅರಸುರವರ ಆಡಳಿತದಲ್ಲಿ ದೇಶದ ಅಭಿವೃದ್ಧಿಯ ಸಲುವಾಗಿ ಅನೇಕ ಸಾಮಾಜಿಕ, ಆರ್ಥಿಕ ರಾಜಕೀಯ ಸುಧಾರಣೆಗಳನ್ನು ಜಾರಿಗೆ ತಂದರು. ಅದರಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ದನೆ , ನವೋದಯ ಶಾಲೆಗಳ ನಿರ್ಮಾಣ, ಟೆಲಿಕಮ್ಯುನಿಕೇಶನ್ ವಿಭಾಗದಲ್ಲಿ ಕ್ರಾಂತಿ, ಮುಂತಾದ ಕಾರ್ಯಕ್ರಮಗಳನ್ನು ಭಾರತದ ಯುವ ಜನತೆ ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. ಹಾಗು ದೇಶದ ಅಭಿವೃದ್ಧಿಗಾಗಿ ತನು ಮನ ಧನವನ್ನು ತ್ಯಾಗ ಮಾಡಿದ್ದಾರೆ. ಅದೇ ರೀತಿ ಮಾಜಿ ಮುಖ್ಯ ಮಂತ್ರಿಗಳಾದ ದೇವರಾಜ್ ಅರಸು ರವರು ಕರ್ನಾಟಕದ ಎಲೆಕ್ಟ್ರಾನಿಕ್ ಸಿಟಿಯ ಪಿತಾಮಹ ಎಂತಲೂ ಕರೆಯುತ್ತಾರೆ ಎಂದರು ಹಾಗು ಅವರ ಕಾಲದಲ್ಲಿ ಕರ್ನಾಟಕದಲ್ಲಿ ಗೇಣಿ ಶ್ಯಾಸನ, ಪರಿಶಿಷ್ಟ ಜಾತಿ ಜನಾಂಗದವರೊಡನೆ ಹಿಂದುಳಿದ ವರ್ಗ ಗಳ ಅಭಿವೃದ್ಧಿ ನಿಗಮಗಳ ಸ್ಥಾಪನೆ ಗೊಂಡಿತು.  ಹಾಗೂ ಎಲ್ಲಾ ವರ್ಗಗಳ ಅಭಿವೃದ್ದಿಗಾಗಿ ಸ್ವಯಂ ಉದ್ಯೋಗಕ್ಕಾಗಿ ಸಹಾಯ ಧನ ವ್ಯವಸ್ಥೆಯನ್ನು  ಜಾರಿಗೆ ತಂದರು. ಇದೇ ರೀತಿ ಕಾರ್ಯಕ್ರಮಗಳ ಪಟ್ಟಿ ಮಾಡುತ್ತಾ ಹೋದರೆ ವಾರದುದ್ದಕ್ಕೂ ವರ್ಣನೆ ಮಾಡಬೇಕಾಗುತ್ತದೆ ಎಂದರು. ಕೊನೆಯಲ್ಲಿ ಈ ಇಬ್ಬರು ದೇಶ ಕಂಡ ಮಹಾನ್ ನಾಯಕರುಗಳಲ್ಲಿ ಅಗ್ರ ಗಣ್ಯರಾಗಿರುತ್ತಾರೆ. ಅವರು ಹಾಕಿಕೊಟ್ಟ ಆದರ್ಶದ ಅಭಿವೃದ್ಧಿಯ ಮಾರ್ಗದರ್ಶನದಲ್ಲಿ ನಾವು ನೀವೆಲ್ಲರು ನೆಡೆದು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳೊವೆಂದರು.  

ಈ ಕಾರ್ಯಕ್ರಮದಲ್ಲಿ  ಕಮಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ವಿ. ಸೋಮಪ್ಪ, ವೆಂಕಟರಮಣ, ರಾಮನಗೌಡ, ಸೇವಾದಳ ಮಾರೆಣ್ಣ, ಮಹೇಶ್, ಅಣ್ಣಮಲೈ, ಬಸವಲಿಂಗಪ್ಪ ಮೇಟಿ, ಶ್ರೀನಿವಾಸ, ಗಣೇಶ, ವಿಜಯ ಕುಮಾರ್, ಇಂದುಮತಿ, , ಗಂಗಮ್ಮ, ನಾಗರಾಜ್, ಲಿಂಗನಾಯಕ, ಹಯಾತ್ ಬಾಷ, ರಾಜು, ಒಬಳೇಶ್, ಹಾಗು ಹೊಸಪೇಟೆ ಬ್ಲಾಕ್  ಎಲ್ಲಾ ಪದಾಧಿಕಾರಿಗಳು  ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಸದಸ್ಯರು,  ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು , ಕಾರ್ಯಕರ್ತರು ಭಾಗವಹಿಸಿದ್ದರು. 


ಸುದ್ದಿ ಓದಿ