ಬಿಲ್ ಗೇಟ್ಸ್ ಗೆ ಪಿತೃ ವಿಯೋಗ
ವಾಷಿಂಗ್ಟನ್, ಸೆಪ್ಟೆಂಬರ್ 16: ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಪಿತೃ ವಿಯೋಗಕ್ಕೆ ಒಳಗಾಗಿದ್ದಾರೆ. ಬಿಲ್ ಗೇಟ್ಸ್ ಅವರ ತಂದೆ, ವಿಲಿಯಂ ಎಚ್. ಗೇಟ್ಸ್,( 94), ಸೋಮವಾರ ನಿಧನರಾಗಿದ್ದಾರೆ.
ಕುಟುಂಬ ಸದಸ್ಯರ ನಡುವೆ ತಮ್ಮ ತಂದೆ ಕೊನೆಯುಸಿರೆಳೆದರು ಎಂದು ಬಿಲ್ ಗೇಟ್ಸ್ ತಿಳಿಸಿದ್ದಾರೆ. ಕೆಲ ಸಮಯದಿಂದ ಅವರ ಆರೋಗ್ಯ ಕ್ಷೀಣಿಸುತಿತ್ತು. ಅನಿವಾರ್ಯವಾದ ಈ ದಿನಕ್ಕಾಗಿ ತಾವು ಮಾನಸಿಕವಾಗಿ ಸಿದ್ಧಗೊಂಡಿದ್ದಾಗಿ ಗೇಟ್ಸ್ ಹೇಳಿದ್ದಾರೆ. ತಮ್ಮ ತಂದೆ ಆಲ್ ಜೈಮರ್ ಕಾಯಿಲೆಯಿಂದ ಬಳಲುತ್ತಿದ್ದರು. ಸಮುದಾಯ ಸೇವೆಗಾಗಿ ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ಗೇಟ್ಸ್ ಫೌಂಡೇಶನ್ ಸ್ಥಾಪಿಸುವಲ್ಲಿ ತಮ್ಮ ತಂದೆ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದ್ದಾರೆ.
ಅವರು ಇನ್ನಿಲ್ಲ ಎಂಬುದನ್ನು ಹೇಳಲು ಪದಗಳಿಂದ ಸಾಧ್ಯವಿಲ್ಲ. ಬುದ್ಧಿವಂತಿಕೆ, ನಮ್ರತೆ ಹಾಗೂ ಔದಾರ್ಯದ ಮೂಲಕ ತಮ್ಮ ಸುತ್ತಮುತ್ತಲ ಜನರನ್ನು ಬಹಳವಾಗಿ ಪ್ರಭಾವಿಸಿದ್ದರು ಅವರನ್ನು ತಂದೆ ಪಡೆದೆ ನಾವು ಅದೃಷ್ಟವಂತರು. ತಂದೆ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ್ದರು. ನಾನು ಅವರಂತೆ ಇರಲು ಪ್ರಯತ್ನಿಸುತ್ತೇನೆ. ನನ್ನ ತಂದೆ ನಿಜವಾದ ಬಿಲ್ ಗೇಟ್ಸ್. "ನಾನು ಅವರನ್ನು ಪ್ರತಿದಿನ ತಪ್ಪಿಸಿಕೊಳ್ಳುತ್ತೇನೆ" ಎಂದು ಗೇಟ್ಸ್ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.