ಆ. 14 ರಂದು ಬಿಜೆಪಿ ಯುವ ಮೋರ್ಚಾದಿಂದ ಬೈಕ್ ರ್ಯಾಲಿ: ನರಹರಿ ಕಟ್ಟಿ
ಶಿಗ್ಗಾವಿ 13: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇದೆ ಆ. 14 ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಚೆನ್ನಮ್ಮನ ವೃತ್ತದಿಂದ ಬಿಜೆಪಿ ಯುವ ಮೋರ್ಚಾ ವತಿಯಿಂದ ಬೈಕ್ ರಾ್ಯಲಿಯನ್ನು ಹಮ್ಮಿಕೊಳ್ಳಲಾಗಿದ್ದು ರಾ್ಯಲಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾ ಮುಖಂಡ ನರಹರಿ ಕಟ್ಟಿ ಹೇಳಿದರು.
ಶಿಗ್ಗಾವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಯುವ ಮೂರ್ಚಾ ವತಿಯಿಂದ ಹಮ್ಮಿಕೊಂಡ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಂದು ಸುಮಾರು ಐದು ನೂರು ಬೈಕುಗಳು ರಾ್ಯಲಿಯಲ್ಲಿ ಭಾಗವಹಿಸಲಿದ್ದು ರಾ್ಯಲಿಯು ಪಟ್ಟಣದಾದ್ಯಾಂತ ಸಂಚರಿಸಿ ನಂತರ ಸವಣೂರು ಪಟ್ಟಣಕ್ಕೆ ತೆರಳಲಿದ್ದು ಅಲ್ಲಿ ವಿ. ಕೃ ಗೋಕಾಕ್ ಅವರ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
ಬಿಜೆಪಿ ತಾಲೂಕಾ ಯುವ ಮೋರ್ಚಾ ಅದ್ಯಕ್ಷ ಶಿವರಾಜ ರಾಯಣ್ಣವರ ಮಾತನಾಡಿ, ರಾ್ಯಲಿಯಲ್ಲಿ ಬಿಜೆಪಿಯ ಮುಖಂಡರು ಹಾಗೂ ಯುವ ಘಟಕದ ಪದಾಧಿಕಾರಿಗಳು ಹೆಚ್ಚಿನ ಸಂಖೈಯಲ್ಲಿ ಭಾಗವಹಿಸಿ ಬೈಕ ರಾ್ಯಲಿ ಯಶಸ್ವಿಗೋಳಿಸೋಣ ಎಂದರು.
ಸಭಯಲ್ಲಿ ಮಂಡಲದ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಯುವ ಮೋರ್ಚಾ ಕಾರ್ಯದರ್ಶಿಗಳಾದ ಕಾಶಿನಾಥ ಕಳ್ಳಿಮನಿ, ವಿನಯ ಮುಂಡಗೋಡ, ಜಿಲ್ಲಾ ಪ್ರ.ಕಾರ್ಯದರ್ಶಿ ಪ್ರತೀಕ ಕೊಳೇಕರ, ಮಲ್ಲಿಕಾರ್ಜುನ ಹಡಪದ, ಸಚಿನ ಮಡಿವಾಳರ, ಮಹಾದೇವಪ್ಪ ಹಡಪದ, ಪ್ರಶಾಂತ ಬಡ್ಡಿ, ಮುತ್ತು ಯಲಿಗಾರ, ಚೇತನ ಕಲಾಲ ಮುಖಂಡರಾದ ಶ್ರೀಕಾಂತ ಬುಳ್ಳಕ್ಕನವರ, ಪ್ರ.ಕಾರ್ಯದರ್ಶಿ ಬಸವರಾಜ ನಾರಾಯಣಪುರ, ತಾಲೂಕ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಶರೀಫ ನದಾಫ್, ಕೆ.ಎಂ.ಎಫ್ ನಿರ್ದೇಶಕ ಬಸನಗೌಡ್ರ ಮೇಲಿನಮನಿ, ಸೇರಿದಂತೆ ಬಿಜೆಪಿ ಪ್ರಮುಖರು ಹಾಗೂ ಕಾರ್ಯರ್ತರು ಇದ್ದರು.