ದ್ವಿಚಕ್ರ ವಾಹನಗಳ್ಳರ ಬಂಧನ

ದ್ವಿಚಕ್ರ ವಾಹನಗಳ್ಳರ ಬಂಧನ

ಬೆಂಗಳೂರು, ಜು.20 ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.


 ಏ.19ರಂದು ರಾತ್ರಿ ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನವನ್ನು ಮನೆ ಬಳಿ ನಿಲ್ಲಿಸಿದ್ದಾಗ ಕಳುವಾಗಿದ್ದ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


ಬಂಧಿತರಿಂದ 1.50 ಲಕ್ಷ ರೂ. ಮೌಲ್ಯದ 3 ಸ್ಕೂಟರ್ ಗಳನ್ನು ವಶಪಡಿಸಿಕೊಂಡು ವರದಿಯಾಗಿದ್ದ 3 ವಾಹನ ಕಳವು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.


ಆರೋಪಿಗಳು ಜ್ಞಾನಭಾರತಿ, ವಿಜಯನಗರ ಹಾಗೂ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಗಳಲ್ಲಿ ಬೈಕ್‍ಗಳನ್ನು ಕಳವು ಮಾಡಿರುವುದಾಗಿ ಅವರು ತಿಳಿಸಿದ್ದಾರೆ.


ಇನ್‍ಸ್ಪೆಕ್ಟರ್ ಲಕ್ಷ್ಮಣ್‍ನಾಯಕ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಸುದ್ದಿ ಓದಿ