ರಾಮದುರ್ಗ

ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ರಾಮದುರ್ಗ 20: ಸಂಗಳ ಗ್ರಾಮದ ಅಭಿವೃದ್ದಿಗೆ ಸುಮಾರು 2 ಕೋಟಿಗಿಂತಲೂ ಹೆಚ್ಚು  ಕಾಮಗಾರಿಗಳನ್ನು ನನ್ನ ಅವಧಿಯಲ್ಲಿ ಮಂಜೂರ ಮಾಡಿಸಿದ್ದೇನೆ, ಇನ್ನೂ ಉಳಿದ ಕಾಮಗಾರಿಗಳನ್ನು ಹಂತವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿ ಅಭಿವೃದ್ಧಿಗೆ ಗ್ರಾಮಸ್ಥರು ಸಹಕರಿಸಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. 

ತಾಲೂಕಿನ ಹೊಸಕೇರಿ ಪ್ರಾಥಮಿಕ ಶಾಲೆಯ 2 ಕೊಠಡಿ ನಿರ್ಮಣಕ್ಕೆ ರೂ. 20 ಲಕ್ಷ ಬೆನ್ನೂರ ಅಂಗವಾಡಿ ನೂತನ ಕಟ್ಟಡ ರೂ. 17 ಲಕ್ಷ, ಸಂಗಳ ಎಸ್ ಟಿ ಕಾಲೋನಿಯ ಸಿ ಸಿ ರಸೆ ನಿರ್ಮಾಣಕ್ಕೆ ರೂ.20 ಲಕ್ಷ ಹಾಗೂ ಸಂಗಳದ ಅಂಗನವಾಡಿ ಕಟ್ಟಡಕ್ಕೆ ರೂ. 17 ಲಕ್ಷ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕಾಮಗಾರಿಯು ಪೂಜೆ ಮಾಡಿದ ಕೇಲವೇ ದಿನಗಳಲ್ಲಿ ಪ್ರಾರಂಭಿಸಬೇಕು ವಿನಾ ಕಾರಣ ವಿಳಬಂವಾದರೆ  ಇಲಾಖೆ ಅಧಿಕರಿಗಳು ಹಾಗೂ ಗುತ್ತಿಗೆದಾರರನ್ನು ಹೊನೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

 ಲೊಕೊಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿವೃದ್ದಿ ಅಧಿಕಾರಿ ರಮೇಶ ಸೊಲ್ಲಾಪೂರ, ಮಹಿಳಾ ಮತು ಮಕ್ಕಳ ಅಭಿವೃದ್ದಿ ಸಹಾಯಕ ಅಧಿಕಾರಿಗ ಮಂಜೂಳಾ ರಗಡೆ, ಬಸಣ್ಣ ಕುದರಿ, ಪ್ರಾಥಮಿಕ ಶಾಲಾ ಸಿಬ್ಬಂದಿಗಳು, ಗುತ್ತಿಗೆದಾರ ಸಾಸಪ್ಪ ಅವರಾದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 

ಸುದ್ದಿ ಓದಿ