ನೂತನ ಪ್ರಧಾನ ಶಾಖೆಯ ಭೂಮಿ ಪೂಜೆ

ನೂತನ ಪ್ರಧಾನ ಶಾಖೆಯ ಭೂಮಿ ಪೂಜೆ

ಲೋಕದರ್ಶನ ವರದಿ

ಅಥಣಿ 23:  ಕೃಷ್ಣಾ ಕೋ ಆಪ್ ಕ್ರೆಡಿಟ್ ಸೊಸೈಟಿಯು ಕಳೆದ 25 ವರ್ಷಗಳಿಂದ 9 ಶಾಖೇಗಳಲ್ಲಿ ಯಶಸ್ವಿಯಾಗಿ ಠೇವಣಿದಾರರ ಹಾಗೂ ಸಾಳಗಾರರ ಸಹಕಾರದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು, ಅವರು ಅಥಣಿ ಶೂಗರ್ಸ ಆವರಣದಲ್ಲಿ 50 ಲಕ್ಷ ವೆಚ್ಚದ ನೂತನ ಪ್ರಧಾನ ಶಾಖೆಯ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

             ಕೃಷ್ಣಾ  ಕೋಆಪ್ ಕ್ರೆಡಿಟ್ ಸೊಸೈಟಿ 25 ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಕೆಲವೇ ಕೆಲವು ಸಹಕಾರಿಗಳಿಂದ ಪ್ರಾರಂಭಗೊಂಡಿತು. ಪ್ರಾರಂಭದಿಂದಲೂ ಸೊಸೈಟಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವ ನಾನು ಸೊಸೈಟಿಯ ಯಶಸ್ಸಿಗೆ ಶ್ರಮಿಸುತ್ತಿದ್ದು, ನನ್ನ ಜೊತೆಗೆ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗವೂ ಕೂಡ ಶ್ರಮಿಸುತ್ತಿದೆ ಎಂದರು.

           ಸೊಸೈಟಿಯಲ್ಲಿ 225 ಕೋಟಿ ಠೇವಣಿ ಪಡೆಯಲಾಗಿದೆ ಹಾಗೂ 210 ಕೋಟಿ ರೂ ಸಾಲ ನೀಡಲಾಗಿದೆ ಎಂದ ಅವರು 50 ಕ್ಕೂ ಹೆಚ್ಚು ಯುವಕ ಯುವತಿಯರಿಗೆ ಉದ್ಯೋಗ ನೀಡಲಾಗಿದೆ ಎಂದರು.

            ಕೃಷಿ, ಸ್ವಂತ ಉದ್ಯೋಗ, ವಾಹನ ಖರೀದಿಗೆ ತಕ್ಷಣ ಸಾಲ ನೀಡಲಾಗುತ್ತಿದ್ದು ಸಾಲದ ಮರು ಪಾವತಿ ಕೂಡ ನೂರಕ್ಕೆ ನೂರರಷ್ಟಾಗಿದೆ ಎಂದ ಅವರು ಪ್ರಧಾನ ಕಚೇರಿ ಕೆಂಪವಾಡ ಸೇರಿದಂತೆ ಅಥಣಿ. ಉಗಾರ ಬಿ.ಕೆ, ಉಗಾರ ಕೆ.ಎಚ್, ಐನಾಪುರ, ಮಂಗಸೂಳಿ, ಜಂಬಗಿ, ಗುಂಡೇವಾಡಿ ಶೆಡಬಾಳದಲ್ಲಿ ಶಾಖೆಗಳನ್ನು ಪ್ರಾರಂಭಿಸಲಾಗಿದೆ ಎಂದರು.

          ಡಿ.ಕೆ.ಪವಾರ, ಎಂ.ಡಿ.ಜಾಧವ, ಕಾಕಾ ಪಾಟೀಲ, ಧೋಂಡಿರಾಮ ಅವಳೆಕರ, ಶಿವಾನಂದ ಗೊಲಭಾವಿ, ರಮೇಶ ನೀವಲಗಿ, ಆಬಾಸಾಹೇಬ ಚವ್ಹಾಣ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು 

ಸುದ್ದಿ ಓದಿ