ಪತ್ರಿಕಾ ಭವನ ಸೇರಿದಂತೆ ಹಲವು ಕಾಮಗಾರಿಗಳ ಭೂಮಿ ಪೂಜೆ.
ಮಹಾಲಿಂಗಪುರ : 10 ಲಕ್ಷ ವೆಚ್ಚದ ಪತ್ರಿಕಾ ಭವನ ಹಾಗೂ 15 ಲಕ್ಷ ವೆಚ್ಚದ ವೈದ್ಯರ ಭವನ ನಿರ್ಮಾಣಕ್ಕೆ ಶಾಸಕ ಹಾಗೂ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಭೂಮಿ ಪೂಜೆ ನೆರವೇರಿಸಿದರು. ಕಾನಿಪ ವತಿಯಿಂದ ಅಧ್ಯಕ್ಷ ಮಹೇಶ ಆರಿ ನೇತೃತ್ವದಲ್ಲಿ ಹಾಗೂ ವೈದ್ಯ ಸಂಘದ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸ್ಥಳೀಯ ಬ್ರಹ್ಮ ವಿದ್ಯಾಶ್ರಮದ ಸಿದ್ದರೂಢ ಮಠದ ಸಹಜಾನಂದ ಸಾನಿಧ್ಯ ವಹಿಸಿ, ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಪುರಸಭೆ ಸದಸ್ಯರಾದ ಶೇಖರ ಅಂಗಡಿ, ರಾಜು ಚಮಕೇರಿ, ಚನ್ನಬಸು ಯರಗಟ್ಟಿ, ತಿಪ್ಪಣ್ಣ ಬಂಡಿವಡ್ಡರ,ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ,ಮುಖಂಡರಾದ ಈರ್ಪ ದಿನ್ನಿಮನಿ,ಮಹಾಲಿಂಗ ಕುಳ್ಳೊಳ್ಳಿ, ಚನ್ನಪ್ಪ ಪಟ್ಟಣಶೆಟ್ಟಿ,ವಿಜಯಕುಮಾರ ಸಬಕಾಳೆ, ಡಾ. ವಿಶ್ವನಾಥ ಗುಂಡಾ,ಡಾ.ಅಶೋಕ ದಿನ್ನಿಮನಿ, ಡಾ. ಬಿ. ಡಿ.ಸೋರಗಾವಿ, ಡಾ. ಸಂದೀಪ ಕನಕರಡ್ಡಿ, ಡಾ. ಮೇದಾರ,ಇಸ್ಮಾಯಿಲ್ ತೇರದಾಳ, ಶಿವಾನಂದ ಹುಣಶ್ಯಾಳ, ಬಸವರಾಜ ಚಮಕೇರಿ,ಮಹೇಶ ಜಿಡ್ಡಿಮನಿ, ಎಂ.ಎಸ್ ಮುಗಳಖೋಡ ಇತರರಿದ್ದರು.