ಭಗೀರಥ ಉಪ್ಪಾರ ಸಮಾಜದ ಸಭೆ

ಭಗೀರಥ ಉಪ್ಪಾರ ಸಮಾಜದ ಸಭೆ

ಮರಿಯಮ್ಮನಹಳ್ಳಿ:  ಹೊಸಪೇಟೆ ತಾಲೂಕಿನ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಯು.ಆಂಜಿನೇಯ  ಇವರ ಅಧ್ಯಕ್ಷತೆಯಲ್ಲಿ ಭಾನುವಾರ ದಿನಾಂಕ ಏ.04 ರಂದು  ಬೆಳಿಗ್ಗೆ 10.30ಕ್ಕೆ  ಹೊಸಪೇಟೆ ನಗರದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಯಾತ್ರಿ ನಿವಾಸದಲ್ಲಿ ಸಭೆ ಕರೆಯಲಾಗಿದೆ. 

ನೂತನ ವಿಜಯ ನಗರ ಜಿಲ್ಲೆ ರಚನೆಯಾದ ಹಿನ್ನಲೆಯಲ್ಲಿ   ವಿಜಯ ನಗರ ಜಿಲ್ಲೆಗೆ ಉಪ್ಪಾರ ಭಗೀರಥ ಸಂಘದ ಪದಾಧಿಕಾರಿಗಳ ಆಯ್ಕ ಸಂಬಂಧಿಸಿದಂತೆ ಚರ್ಚಿಸಲಾಗುವುದು. ಈ ಸಂಬಂಧ  ನೂತನ  ವಿಜಯ ನಗರ ಜಿಲ್ಲೆಯ ಹರಪನಹಳ್ಳಿ, ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೊಸಪೇಟೆ, ಕೂಡ್ಲೀಗಿ ತಾಲೂಕುಗಳ ಎಲ್ಲಾ ಉಪ್ಪಾರ ಸಂಘಗಳ ಪದಾಧಿಕಾರಿಗಳು, ಹೋಬಳಿ, ಗ್ರಾಮ ಘಟಕಗಳ ಪದಾಧಿಕಾರಿಗಳು, ಸಮಾಜದ ಮುಖಂಡರು,  ಚಿಂತಕರು ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆಗಳನ್ನು ಅಭಿಪ್ರಾಯಗಳನ್ನು ಮಂಡಿಸಬಹುದಾಗಿದೆ ತಪ್ಪದೇ ಉಪ್ಪಾರ ಸಮಾಜದ ಬಾಂಧವರು ಪಾಲ್ಗೊಳ್ಳಬೇಕೆಂದು ಹೊಸಪೇಟೆ ತಾಲೂಕಿನ ಭಗೀರಥ ಉಪ್ಪಾರ ಸಂಘದ ಕಾರ್ಯದರ್ಶಿ ಸೋಮಪ್ಪ ಉಪ್ಪಾರ ನಂದಿ ಬಂಡಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಓದಿ