ಮಹಲಿಂಗಪುರ

ಸಮಾಜಘಾತುಕರ ಬಗ್ಗೆ ಎಚ್ಚರ: ಶಾಂತಿ ಸಭೆಯಲ್ಲಿ ಸಿಪಿಆಯ್ ರಾಜು ಪಾಟೀಲ

ಸಮಾಜಘಾತುಕರ ಬಗ್ಗೆ ಎಚ್ಚರ: ಶಾಂತಿ ಸಭೆಯಲ್ಲಿ ಸಿಪಿಆಯ್ ರಾಜು ಪಾಟೀಲ

ಲೋಕದರ್ಶನ ವರದಿ 

ಮಹಾಲಿಂಗಪುರ 24: ಸಾಮಾಜಿಕ ಜಾಲತಾಣಗಳಲ್ಲಿ ಹಳೆ ಅಥವಾ ಎಡಿಟ್ ಮಾಡಿರುವ ವಿಡಿಯೋಗಳನ್ನು ಮತ್ತು ಅದಕ್ಕೆ ತಕ್ಕಂತೆ ಇಲ್ಲಸಲ್ಲದ ಆರೋಪ ಮತ್ತು  ಸಂವಾದ ಸಹ ಬಿತ್ತರ ಮಾಡಿ ಹಿಂದೂ ಮುಸ್ಲಿಂ ಸಮುದಾಯಗಳ ಮಧ್ಯೆ ಬೇಧ ಮೂಡಿಸುವ ಸಮಾಜ ಘಾತುಕ ಶಕ್ತಿಗಳ ಬಗ್ಗೆ ಎಚ್ಚರ ವಹಿಸಿ ಎಂದು ರಬಕವಿ/ ಬನಹಟ್ಟಿ ತಾಲೂಕು ನೂತನ ಸಿಪಿಆಯ್ ಆರ್‌.ಆರ್‌.ಪಾಟೀಲ್ ಹೇಳಿದರು. 

ಸೋಮವಾರ ಮಹಾಲಿಂಗಪುರ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಮೇ 28 ರಂದು ನಡೆಯಲಿರುವ ಬಕ್ರೀದ್ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬಗಳ ಆಚರಣೆಯು ಆಯಾ ಸಮುದಾಯಗಳ ಜನತೆಯಲ್ಲಿ ಹರ್ಷೋಲ್ಲಾಸವನ್ನು ಇಮ್ಮಡಿಗೊಳಿಸುತ್ತದೆ.ಇದೆ ಸಮಯದಲ್ಲಿ ಶಾಂತಿಗೆ ಭಂಗ ತರುವಂತಹ ಕಾರ್ಯವನ್ನು ಯಾರೂ ಮಾಡಬಾರದು.ಮಾಡಿದ್ದೆ ಆದರೆ ನಮ್ಮ ಪೋಲೀಸ್ ಇಲಾಖೆ ಸುಮ್ಮನೆ ಕುಳಿತುಕ್ಕೊಳ್ಳುವುದಿಲ್ಲ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳುತ್ತದೆ ಎಂದು ಖಾರವಾಗಿ ನುಡಿದರು. 

ಮಹಾಲಿಂಗಪುರ ಪಟ್ಟಣದ ಎಲ್ಲ ಸಮುದಾಯಗಳ ಜನರು ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಪಾಲ್ಗೊಂಡು ಪರಸ್ಪರ ಸೌಹಾರ್ದ ನುಡಿಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ಅಶೋಕ ಅಂಗಡಿ ಹಿಂದುಗಳ ಪರವಾಗಿ ಮತ್ತು ನಜೀರ್ ಅತ್ತಾರ ಮುಸ್ಲಿಂರ ಪರವಾಗಿ ಸೌಹಾರ್ದತೆಯಿಂದ ನಡೆದುಕ್ಕೊಳ್ಳುವ ಭರವಸೆಯನ್ನು ನೀಡಿದರು. ಸ್ಥಳೀಯ ಠಾಣಾಧಿಕಾರಿ ಕಿರಣ ಸತ್ತಿಗೇರಿ 

ಈ ಶಾಂತಿ ಸಭೆಯಲ್ಲಿ, ಮೇಹಬೂಬ ಜೀರಗಾಳ, ಮುಸ್ತಫಾ ಚಿಕ್ಕೋಡಿ, ಜಮೀರ್ ಯಕ್ಸಂಬಿ, ಹಾಸಿಂ ಪೆಂಡಾರಿ,ಬುಡ್ಡಾ ಪೆಂಡಾರಿ,ಫಾರೂಖ್ ಪಕಾಲಿ, ಆನಂದ ಬಂಡಿ, ಯುನೂಸ್ ಬೀಳಿಗಿ,ಯಾಸೀನ್ ಐನಾಪೂರ,ನಿಂಗಪ್ಪ ಹ್ಯಾಗಾಡಿ, ಅನ್ನು ಪೆಂಡಾರಿ, ಮುಬಾರಕ ಅಲ್ಲಾಖಾನ, ಮಹ್ಮದ್ ಢವಳೇಶ್ವರ, ಯಾಸೀನ್ ಬಳಗಾರ ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು, ಪೇದೆಗಳು ಮತ್ತು ಸಿಬ್ಬಂದಿಗಳು ಸೇರಿದಂತೆ ಇನ್ನೂ ಮುಂತಾದವರಿದ್ದರು. ಠಾಣಾಧಿಕಾರಿ ಕಿರಣ ಸತ್ತಿಗೇರಿ ಸ್ವಾಗತಿಸಿ, ವಂದಿಸಿದರು. 


ಸುದ್ದಿ ಓದಿ